ನವಲಗುಂದ ಬೈಪಾಸ್ ರಸ್ತೆ ಟೆಂಡರ್ ಕರೆಯಲು ಮನವಿ
Request to call tender for Navalgund bypass road
ಹುಬ್ಬಳ್ಳಿ, 26 ; ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ ಬೈಪಾಸ್, ಅಣ್ಣಿಗೇರಿ ಅಂಬಿಗೇರ ಹೆದ್ದಾರಿವರೆಗೆ ಅಣ್ಣಿಗೇರಿ ಮತ್ತು ಶಿರಗುಪ್ಪಿ ಹತ್ತಿರ ಸರ್ವಿಸ ರಸ್ತೆ ಓಊಂಋ ವತಿಯಿಂದ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಒತ್ತಾಯಿಸಿದರು.
ಅವರು ಇಂದು ಹುಬ್ಬಳ್ಳಿಯ ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮನವಿ ಸಲ್ಲಿಸಿ ಅಣ್ಣಿಗೇರಿ ನಗರದ ಹಳೇ ರಾಷ್ಟ್ರೀಯ ಹೆದ್ದಾರಿ-63 ಅಣ್ಣಿಗೇರಿ ಅಂಬಿಗೇರ ಹೆದ್ದಾರಿವರೆಗೆ ಒಂದು ಬಾರಿ ಅಭಿವೃದ್ಧಿಪಡೆಸುವದು, ರಾಷ್ಟ್ರೀಯ ಹೆದ್ದಾರಿ ಹಿ 63 ರ ಅಣ್ಣಿಗೇರಿ ನಗರ ಹಾಗೂ ಶಿರಗುಪ್ಪಿ ಗ್ರಾಮದ ಹತ್ತಿರ ಬಾಕಿ ಉಳಿದ ಸರ್ವಿಸ್ ರಸ್ತೆಗಳನ್ನು ಮತ್ತು ಬಂಗಾರ್ಪ ನಗರದ ಹತ್ತಿರ ಓವರ್ ಬ್ರಿಡ್ಜ್ (ಖಠ) ನಿರ್ಮಾಣ, ಈ ಹಿಂದೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾದ ಪಟ್ಟಿಯಲ್ಲಿರುವ ಪುಣಾ-ಬೆಂಗಳೂರು ರಸ್ತೆಯ ಎನ್.ಹೆಚ್-4 ತಡಸ-ಕಲಘಟಗಿ-ಧಾರವಾಡ-ಹೆಬಸೂರ-ನವಲಗುಂದ-ಅಣ್ಣಿಗೇರಿ ರಾಷ್ಟ್ರೀಯ ಹೆದ್ದಾರಿ ಹಿ 63ರ ವರೆಗೆ ಕೂಡುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವದು, ಹುಬ್ಬಳ್ಳಿ ಕುಸುಗಲ್ ಬ್ಯಾಹಟ್ಟಿ ತಿರ್ಲಾಪೂರ ಅಳಗವಾಡಿ ನರಗುಂದ ವರೆಗೆ ರಾಷ್ಟ್ರೀಯ ಹೆದ್ದಾರಿ ಹಿ 218 ದಿಂದ ಎನ್.ಹೆಚ್- 63 ಒಟ್ಟು 45 ಕಿ.ಮೀ. ರಾಜ್ಯ ಹೆದ್ದಾರಿಯನ್ನು ಕೇಂದ್ರ ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಸೇರಿಸಬೇಕು. ಅಣ್ಣಿಗೇರಿ ಹಳ್ಳಿಕೇರಿ ಇಬ್ರಾಹಿಂಪೂರ ಜಿಲ್ಲಾ ಮುಖ್ಯ ರಸ್ತೆಯನ್ನು ಅಂದಾಜು 16.40 ಕಿ.ಮೀ ರಸ್ತೆಯನ್ನು ಅಖಋ ಸೇತುಬಂಧು ಯೋಜನೆಯಲ್ಲಿ ಸೇರಿಸಿ ರಸ್ತೆ ಅಭಿವೃದ್ಧಿಪಡೆಸಬೇಕು ಹಾಗೂ ನವಲಗುಂದ ನಗರದಲ್ಲಿ ಸಂಚಾರ ದಟ್ಟನೆ ಹೆಚ್ಚಾಗುತ್ತಿದ್ದು ಕೂಡಲೇ ಮಂಜೂರಾದ ನವಲಗುಂದ ಬೈಪಾಸ್ ರಸ್ತೆಯನ್ನು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಮನವಿ ಸಲ್ಲಿಸಲಾಯಿತು.
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಮಹಾದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಮಹಾದಾಯಿ ನ್ಯಾಯಾಧೀಕರಣ ಐ-ತೀರ್ಿನ ಪ್ರಕಾರ ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಕೇಂದ್ರ ಸರ್ಕಾರದ ಅರಣ್ಯ ಹಾಗೂ ಪರಿಸರ ಇಲಾಖೆಯು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆಯನ್ನು ಇಲ್ಲಿಯವರೆಗೂ ನೀಡಲಿಲ್ಲ. ಕೂಡಲೇ ವನ್ಯಜೀವಿ ಮಂಡಳೀಯಿಂದ ಅನುಮತಿ ಕೊಡಿಸಬೇಕೆಂದು ಕೇಂದ್ರ ಸಚಿವರಿಗೆ ಕೋನರಡ್ಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಹು-ಧಾ ಪೂರ್ವ ಶಾಸಕರಾದ ಪ್ರಸಾದ ಅಬ್ಬಯ್ಯ, ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ, ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ ಚೌವ್ಹಾಣ, ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಜೆ.ಆರ್.ಜೆ., ಜಿ.ಪಂ. ಸಿ.ಇ.ಓ. ಭುವನೇಶ ಪಾಟೀಲ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಉಪವಿಭಾಗಾಧಿಕಾರಿ ಶಲಾಂ ಹುಸೇನ್, ಪೊಲೀಸ್ ಕಮೀಷನರ ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಒಓಖಖಿಊ ಪ್ರಾದೇಶಿಕ ಅಧಿಕಾರಿ ನರೇಂದ್ರ ಶರ್ಮಾ, ಓಊಂಋ ಪ್ರಾದೇಶಿಕ ಅಧಿಕಾರಿ ವಿಲಾಸ ಭ್ರಹ್ಮಣಕರ, ರಾ.ಹೆ. ಸಿ.ಇ. ಮನ್ಮಥಯ್ಯಸ್ವಾಮಿ, ಎಸ್.ಇ. ಟಿ. ಪ್ರದೀಪ, ಇಇ ವಿ.ಎನ್. ಪಾಟೀಲ್, ಎಇಇ ಸತೀಶ ನಾಗನೂರ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 