ಹೂವಿನಹಡಗಲಿಯಲ್ಲಿ ಗಣರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ಹೂವಿನಹಡಗಲಿ 26: ಭಾರತದ ಸಂವಿಧಾನದ ರಚನೆ ನಂತರ ದೇಶದ ಮೂಲಸೌಲಭ್ಯ ಪ್ರಗತಿ,ವಿಜ್ಞಾನ,ತಂತ್ರಜ್ಞಾನದ ಅಭಿವೃದ್ದಿ ನಾಗಲೋಟದಲ್ಲಿ ಸಾಗಿದೆ ಎಂದು ತಹಶೀಲ್ದಾರ ಶರಣಮ್ಮ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶದಲ್ಲಿ ಶಾಂತಿ,ಸಹಬಾಳ್ವೆ ಇದೆ. ದೇಶದ ಸೈನಕರು,ಆರೋಗ್ಯ ಇಲಾಖೆ,ಪೊಲೀಸರು, ಅನ್ನದಾತ ರೈತರು ಮತ್ತು ಗುರುಗಳಿಗೆ ನಮನ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ ಭಾರತ ತನ್ನದೇ ಆದ ಸಂವಿಧಾನವನ್ನು ಜಾರಿಗೆ ತರುತ್ತಿದ್ದಂತೆಯೇ ಪ್ರಜಪ್ರಭುತ್ವ ಗಣರಾಜ್ಯವಾಗಿ ಬದಲಾಯಿತು. ಭಾರತ ಉತ್ತಮ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಂವಿಧಾನ ರಚನೆಗೆ ಶ್ರಮಿಸಿದ ಡಾ.ಅಂಬೇಡ್ಕರ ಸೇರಿದಂತೆ ಮಹಾನಿಯರಿಗೆ ನೆನಪಿಸಿಕೊಂಡರು.
ಪುರಸಭೆ ಅಧ್ಯಕ್ಷೆ ಜ್ಯೋತಿ ಮಲ್ಲಣ್ಣ, ಎಸ್.ತಿಮ್ಮaಣ್ಣ,ಮುಖಂಡರಾದ ಬಸವನಗೌಡ ಪಾಟೀಲ,ಬಿ.ಹನುಮಂತಪ್ಪ,ತಾ.ಪಂ.ಇಒ ಎಸ್.ಎಸ್.ಪ್ರಕಾಶ್,ಮಹೇಶಪ್ಪ, ಸಿಪಿಐ ಸುಧೀರ ಬೆಂಕಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ. ಇದ್ದರು.ಬಿಇಒ ಎಸ್.ಎನ್.ಹಳ್ಳಿಗುಡಿ ಸ್ವಾಗತಿಸಿದರು. ಎಸ್.ದ್ವಾರಕೇಶರೆಡ್ಡಿ ನಿರೂಪಿಸಿದರು.ಪತ್ರಿಕಾರಂಗ ಹಳ್ಳಿಗುಡಿ ವಿಶ್ವನಾಥ ಸೇರಿದಂತೆ ನಾನಾ ಕ್ಷೇತ್ರಗಳ ಸಾಧಕರಿಗೆ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 10ನೇತರಗತಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು ನಂತರ ನಾನಾ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು