ಸುಭಾಸಚಂದ್ರ ಡೋರಿ ಅಭಿನಂದನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
Release of the invitation card for Subhashchandra Dori's felicitation ceremony
ಲೋಕದರ್ಶನ ವರದಿ
ಮುಂಡಗೋಡ 30 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡಗೋಡ ತಾಲೂಕು ಘಟಕದ ವತಿಯಿಂದ ಆಗಸ್ಟ್ 1ರಂದು ನಡೆಯಲಿರುವ ಹಿರಿಯ ಶಿಕ್ಷಕ ಹಾಗೂ ಮಾಜಿ ತಾಲೂಕು ಅಧ್ಯಕ್ಷ ಸುಭಾಸಚಂದ್ರ ಆರ್. ಡೋರಿ ಅವರ ಸೇವಾ ನಿವೃತ್ತಿ ಅಭಿನಂದನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಡಿ. ಮುಡೆಣ್ಣವರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎಸ್. ಡಿ. ಮುಡೆಣ್ಣವರ ಮಾತನಾಡಿದ ಅವರು, ಸುಭಾಸಚಂದ್ರ ಡೋರಿ ಅವರು 35 ವರ್ಷಗಳ ಕಾಲ ಆದರ್ಶ ಶಿಕ್ಷಕರಾಗಿ ಹಾಗೂ ಸಂಘದ ಅಧ್ಯಕ್ಷರಾಗಿ ಶಿಕ್ಷಕರು ಮತ್ತು ಸರ್ಕಾರಿ ನೌಕರರ ಹಿತಕ್ಕಾಗಿ ಸೇವೆ ಸಲ್ಲಿಸಿದ್ದು, ಇಂತಹ ವ್ಯಕ್ತಿತ್ವವನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಹೇಳಿದರು.
ಗೌರವ ಅಧ್ಯಕ್ಷ ಹನಮಂತ ತಳವಾರ ಮಾತನಾಡಿ, ಆಗಸ್ಟ್ 1ರಂದು ಮಧ್ಯಾಹ್ನ 2.30ಕ್ಕೆ ಮುಂಡಗೋಡದ ದೈವಜ್ಞ ಸಭಾಭವನದಲ್ಲಿ ನಡೆಯುವ ಅಭಿನಂದನೋತ್ಸವದಲ್ಲಿ ಶಿಕ್ಷಕರು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗಣೇಶ ಗಬ್ಬೂರ, ನಿರ್ದೇಶಕರಾದ ಕಾಂತೇಶ ಕುಮ್ಮಣ್ಣವರ, ಎಂ. ಎಸ್. ಕಾರ್ಕಳ, ನಾಗರಾಜ ವಾಲ್ಮೀಕಿ, ಸಂಗಪ್ಪ ಚವಡಿ, ಮಂಜುನಾಥ ನೀಲಮ್ಮನವರ, ಮುತ್ತುರಾಜ ಹೊನ್ನಣ್ಣನವರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣೇಶ ಗಬ್ಬೂರ ಅವರು ಸ್ವಾಗತಿಸಿ, ಎಂ. ಎಸ್. ಕಾರ್ಕಳ ಅವರು ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 