ಜಮಖಂಡಿ

ಕಾನೂನು ಅರಿವು ನೆರವು ಕಾರ್ಯಕ್ರಮ

ಕಾನೂನು ಅರಿವು ನೆರವು ಕಾರ್ಯಕ್ರಮ
ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಕಾನೂನು ನೆರವು ಸಮಾರಂಭವನ್ನು ನ್ಯಾಯಾಧೀಶರು ಉದ್ಘಾಟಿಸಿದರು

ಲೋಕದರ್ಶನ ವರದಿ,

ಜಮಖಂಡಿ 08: ಕಡಿಮೆ ಆದಾಯ ಹೊಂದಿರುವ ಜನರಿಗೆ ಉಚಿತವಾಗಿ ಕಾನೂನಿನ ನೆರವನ್ನು ಒದಗಿಸಲಾಗುವದು. ಗ್ರಾಮೀಣ ಭಾಗದ ರೈತರು ಕಡ್ಡಾಯವಾಗಿ ಲೈಸೆನ್ಸ್ ಪಡೆದು, ಇನ್ಸೂರೆನ್ಸ್ ತುಂಬಿರುವ ವಾಹನಗಳನ್ನು ಚಲಾವಣೆ ಮಾಡಬೇಕು. ಅಪಘಾತಗಳು ಆದಾಗ ಹೆಚ್ಚಿನ ಪರಿಹಾರ ನೀಡುವದು ತಪ್ಪುತ್ತದೆಂದು 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಅಜರ್ುನ ಮಳ್ಳೂರ ಹೇಳಿದರು.

ತಾಲೂಕಿನ ಶೂರ್ಪಾಲಿ ಸರ್ಕಾರಿ  ಪ್ರೌಢಶಾಲೆಯಲ್ಲಿ ನಡೆದ ನ್ಯಾಯ ನಿಮ್ಮದು ನೆರವು ನಮ್ಮದು ಎಂಬ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಕವಿತಾ ಊಂಡೊಡಿ ಮಾತನಾಡಿ, ಗ್ರಾಮೀಣ ಭಾಗದ ಪಾಲಕರು ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣವಿದ್ದರೆ ತಮ್ಮ ಜೀವನವನ್ನು ಕಟ್ಟಿಕೊಂಡು ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆಂದರು.

ರೈತ ಬಸವರಾಜ ಸಿಂಧೂರ ಮಾತನಾಡಿದರು. ಪ್ರಧಾನ ದಿವಾಣಿ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಮುಲ್ಲಾ, ಹೆಚ್ಚುವರಿ ನ್ಯಾಯಾಧೀಶ ಹರ್ಷದ ಅನ್ಸಾರಿ, ಗ್ರಾಪಂ ಅಧ್ಯಕ್ಷೆ ಅಕ್ಕವ್ವ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು, ವಕೀಲ ಸಂತೋಷ್ ಅಂಬಲಿ, ರಾಹುಲ್ ಪಾಟೀಲ್, ಗ್ರಾಪಂ ಸದಸ್ಯ ಕಲ್ಲಪ್ಪ ಬಳೋಲ, ಗಿರಮಲ್ಲ ಜಮಖಂಡಿ, ಬಾವುಸಾಬ ನಾವಿ, ಸಿದ್ದುಗೌಡ ಪಾಟೀಲ, ಮಾದೇವ ಬಾಡಗಿ, ರವಿ ಐಗಳಿ, ಶ್ರೀಕಾಂತ ತುಬಚಿ, ಚಂದ್ರಶೇಖರ ಹಿರೇಮಠ ವೇದಿಕೆಯಲ್ಲಿದ್ದರು.ವಕೀಲ ಗುರುಪಾದ ಚಿನ್ನಾಮಲ್ಲಾ ಸ್ವಾಗತಿಸಿದರು. ಚನ್ನಗಿರಿ ಹೊಸೂರು ನಿರೂಪಿಸಿ, ವಂದಸಿದರು. 



ಸುದ್ದಿ ಓದಿ