ಹಳೆ ಪಿಂಚಣಿ ಮುಂದುವರಿಸದಿದ್ದರೆ ಕೇಂದ್ರದ ವಿರುದ್ಧ ಹೋರಾಟಕ್ಕೆ ಸಿದ್ಧ: ಎಸ್. ಜಿ. ಸಿದ್ನಾಳ
Ready to fight against the Center if old pension is not continued: S. G. Sidnal
ಬೆಳಗಾವಿ 19: ಹೊಸ ಪಿಂಚಣಿಯಿಂದ ನಿವೃತ್ತ ನೌಕರರ ಪಿಂಚಣಿ ಸೌಲಭ್ಯಕ್ಕೆ ಅನ್ಯಾಯವಾಗಲಿದೆ. ಹಳೆ ಪಿಂಚಣಿಯನ್ನು ಮುಂದುವರಿಸಬೇಕು, ಇಲ್ಲದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾಂದ್ಯಂತ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಜಿ. ಸಿದ್ನಾಳ ಹೇಳಿದರು.
ಇಲ್ಲಿನ ನೌಕಕರ ಕಚೇರಿಯಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಸಂದರ್ಭ ನಿವೃತ್ತ ನೌಕರರ ಪಿಂಚಣಿ ಸೌಲಭ್ಯಕ್ಕೆಅನ್ಯಾಯವಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದರ ವಿರುದ್ಧ ಬಲವಾದ ಹೋರಾಟ ಮಾಡಲು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ನಿರ್ಧರಿಸಿದೆ. ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘದದಿಂದ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘವು ಎಂಟನೇ ವೇತನ ಆಯೋಗದ ವರದಿಯ ವಿರುದ್ಧ ಬಲವಾದ ಹೋರಾಟ ಮಾಡಲು ನಿರ್ಧರಿಸಿದೆ. ನಿವೃತ್ತ ನೌಕರರು ತಮ್ಮ ಹಕ್ಕುಗಳಿಗಾಗಿ ಹಂತ ಹಂತವಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ ಮತ್ತು ಸಹಿ ಸಂಗ್ರಹ ಅಭಿಯಾನವನ್ನು ನಡೆಸಿ ಜಿಲ್ಲಾಧಿಕಾರಿಗಳು ಮೂಲಕ ಪ್ರಧಾನ ಮಂತ್ರಿಗಳಿಗೆ ಕಳುಹಿಸಲಾಗುವುದು ಎಂದು ಹೇಳಿದರು.
2025ರ ಏ.1ರ ನಂತರ ನಿವೃತ್ತಿ ಹೊಂದುವ ಸರಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಿ ನೀಡಲಾಗುವುದು. ಅದಕ್ಕೂ ಮೊದಲು ನಿವೃತ್ತಿಯಾದವರಿಗೆ ಈ ಸೌಲಭ್ಯ ಇರುವುದಿಲ್ಲಎಂದು 8ನೇ ಆಯೋಗದ ವರದಿಯಲ್ಲಿ ನಮೂದಿಸಲಾಗಿದೆ ಸರ್ಕಾರ ನಡೆಯಿಂದ ನಿವೃತ್ತ ನೌಕರರ ಜೀವನ ನಡೆಸಲು ಸಮಸ್ಯೆಯಾಗಲಿದೆ. ಕೇಂದ್ರ ಸರ್ಕಾರ ಎಲ್ಲಾ ಕುಟುಂಬಗಳ ಹಿತಾಸಕ್ತಿಯನ್ನು ಕಾಯ್ದುಕೊಂಡ ಹೋಗಬೇಕಿದೆ ಎಂದರು.
7ನೇ ವೇತನ ಅಯೋಗದ ಸೌಲಭ್ಯವೇ ಹೆಚ್ಚಿನವರಿಗೆ ಸಿಕ್ಕಿಲ್ಲ. ಇದೀಗ 8ನೇ ವೇತನ ಆಯೋಗದ ವರದಿ ಜಾರಿಯಾಗುತ್ತಿರುವಾಗ 2026ರ ಏ. 1ರ ಮೊದಲು ನಿವೃತ್ತಿಯಾಗಿರುವ ಸರಕಾರಿ ನೌಕರರಿಗೆ ಪಿಂಚಣಿ ಪರಿಷ್ಕರಿಸುವುದು ಕಷ್ಟ ಸಾಧ್ಯ ಹಾಗೂ ಮುಂದಿನ ತುಟ್ಟಿ ಭತ್ಯೆ ಮಂಜೂರು ಮಾಡುವುದು ಕಷ್ಟ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ. ಕೇಂದ್ರ ಕೈಗೊಳ್ಳುವ ತೀರ್ಮಾನವನ್ನೇ ಮುಂದೆ ರಾಜ್ಯ ಸರಕಾರವೂ ಅನುಸರಿಸಲಿದೆ. ಇದನ್ನು ತಡೆಯಬೇಕು ಎಂದು ಹೇಳಿದರು.
ನಿರ್ಮಲಾ ಸೀತಾರಾಮ ರವರು ಹೇಳಿದಂತೆ ಆರ್ಥಿಕ ಬಿಲ್ ಮಂಡನೆಯಿಂದ ನಿವೃತ್ತ ಸರ್ಕಾರಿ ನೌಕರರ ಕುಟುಂಬ ಪಿಂಚಣಿದಾರರಿಗೆ ಆರ್ಥಿಕ ಸಂಕಷ್ಟವಾಗುತ್ತದೆ. 10 ವರ್ಷದ ನಂತರ ಒಪಿಎಸ್ ಇರುವುದಿಲ್ಲ. ಈಗಲೇ ನಾವು ಬಲವಾಗಿ ಪ್ರತಿಪಾದಿಸಿದರೆ ಪ್ರಯೋಜನ ಸಿಗಬಹುದು. ಪಿಂಚಣಿ ನಮ್ಮ ಹಕ್ಕು. ಇದನ್ನು ಪಡೆಯಲು ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.
ರಾಜ್ಯಾಧ್ಯಕ್ಷ ಎ.ವಾಯ್. ಬೇಂಡಿಗೇರಿ, ಉಪಾಧ್ಯಕ್ಷ ಎಮ್. ವ್ಹಿ. ಹಿರೇಮಠ, ಜಿಲ್ಲಾಧ್ಯಕ್ಷ ಎಸ್. ಜಿ. ಸಿದ್ನಾಳ ಎಮ್ ಎಸ್. ಮುದಕವಿ, ಮಹಾತೇಂಶ ಮೆಣಸಿನಕಾಯಿ ಹಾಗೂ ಇತರರು ಇದ್ದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 