ವಿಜೃಂಭಣೆಯಿಂದ ಯಡೂರ ವೀರಭದ್ರ ಜಾತ್ರೆ: ರಥೋತ್ಸವ
ಮಾಂಜರಿ 23: ಕರ್ನಾಟಕ ಮತ್ತು ಮಹಾರಾಷ್ಟ್ರಾಜ್ಯದ ಹಲವಾರು ಭಕ್ತಾದಿಗಳ ಆರಾಧ್ಯ ದೈವ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದ ವಿಶಾಳಿ ಮಹಾರಥೋತ್ಸವನ್ನು ಇಂದು ಲಕ್ಷಾಂತರ ಭಕ್ತರು ಉಪಸ್ಥಿತಿ ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಯಡೂರಿನ ಕಾಡಸಿದ್ಧೇಶ್ವರ ಸಂಸ್ಥಾನಮಠ ಹಾಗೂ ವೀರಭದ್ರ ದೇವಸ್ಥಾನದ ಧರ್ಮಾ ಧಿಕಾರಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಕುಡಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರ ಪ್ರಮುಖ ಅತಿಥಿ ಸ್ಥಾನದಲ್ಲಿ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಜರಗಿತು.
ದೇಶದಲ್ಲಿ ಮೂರು ವರ್ಷಗಳಿಂದ ಉದ್ಭವಿಸಿದ ಕರೋನಾ ಕಾಯಿಲೆಯಿಂದ ಸ್ವಲ್ಪ ಪ್ರಮಾಣದಲ್ಲಿ ನಡೆದಿರುವ ವೀರಭದ್ರ ದೇವಸ್ಥಾನದ ವಿಶಾಳಿ ಜಾತ್ರಾ ಮಹೋತ್ಸವ ಮತ್ತು ಮಹಾ ರಥೋತ್ಸವ ಇಂದು ಸಾಯಂಕಾಲ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ಮಂದಿರ ತನಕ ಕತೃಗದ್ದುಗೆಯ ಆವರಣದಲ್ಲಿ ಜಮಾಯಿಸಿದ್ದ ನಾಡಿನ ವಿವಿಧ ಮೂಲೆಗಳಿಂದ ಹರಿದು ಬಂದಿದ್ದ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು. ಹರಕೆ ಕಾರ್ಯ ನೆರವೇರಿಸಿದ ಸಂತೃಪ್ತಿ ಅವರಲ್ಲಿ ಮೂಡಿತು.
ನೂರಾರು ಮಂದಿ ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಹಿಡಿದು ಎಳೆಯುತ್ತಿದ್ದರೆ ರಾಜಠೀವಿಯಿಂದ ರಥವು ಸಾಗಿತು. ಮಠದ ಗುರು ಪರಂಪರೆಗೆ ಭಕ್ತರು ಜಯಕಾರ ಹಾಕಿದರು. ಜಾನಪದ ಕಲಾತಂಡಗಳೊಂದಿಗೆ ರಥವು ಕ್ರಮಿಸಿತು. ತಮಟೆ, ನಗಾರಿ ವಾದ್ಯಗಳ ನಾದ ಮುಗಿಲು ಮುಟ್ಟಿತು. ಮುಂದೆ ಸಾಗುತ್ತಿದ್ದ ಚಿಕ್ಕತೇರಿಗೂ ಭಕ್ತವೃಂದ ತಲೆಬಾಗಿ ನಮಸ್ಕರಿಸಿತು. ಹೂ ಪ್ರಸಾದ ಸ್ವೀಕರಿಸಿ ಕೈಮುಗಿಯಿತು. ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು.
ಗಮನಸೆಳೆದ ಕಲಾತಂಡಗಳು: ರಥೋತ್ಸವದ ಮೆರವಣಿಗೆಯಲ್ಲಿ ಸಾಗಿದ ಅನೇಕ ಕಲಾತಂಡಗಳು ದಸರೆಯನ್ನು ನೆನಪಿಸಿದವು.
ನಂದಿಧ್ವಜ ಕುಣಿತ ರಥದ ಮುಂಭಾಗವಿತ್ತು. ಮಹಾರಾಷ್ಟ್ರ ಸೋಲಾಪುರದ ಮಹದೇವಪ್ಪ, ಮಹೇಶ್ ನೇತೃತ್ವದ ಲಿಂಗಧೀರರು ಹೆಜ್ಜೆ ಹಾಕುವ ಮೂಲಕ ಮೆರವಣಿಗೆಯ ಚೆಲುವು ಹೆಚ್ಚಿಸಿದರು. ಉರವಂತರು ವೀರಭದ್ರನ ವೇಷದಲ್ಲಿ ಅವರ ನೃತ್ಯ ನೋಡಿ ಬೆಚ್ಚಿದ ಮಕ್ಕಳು ಪೋಷಕರನ್ನು ತಬ್ಬಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇವರ ಅತಿಥಿ ಸ್ಥಾನದಲ್ಲಿ ರಬಕವಿ ಬನಹಟ್ಟಿ ಜಮಖಂಡಿ ಶಹಾಪೂರ್ ಅಂಬಿಕಾನಗರ ಹೂಲಿ ಬೆಳ್ಳಂಕಿ ಮಠದ ಶಿವಾಚಾರ್ಯ ಸ್ವಾಮೀಜಿಗಳ ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಉಪಸ್ಥಿತಿಯಲ್ಲಿ ಅವರ ಉಪಸ್ಥಿತಿಯಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು ಇಂದು ನಡೆದ ಮಹಾರಥೋತ್ಸವಕ್ಕೆ ಹಲವಾರು ಭಕ್ತಾದಿಗಳು ಮಹಾರಥೋತ್ಸವ ಮೆಲೆ ಬಾಳೆ ಕೊಬ್ಬರಿ ಖಾರೀಕು ಎಸೆದು ತಮ್ಮ ಹರಕೆಯನ್ನು ತೀರಿಸಿದರು ಮಹಾರಥೋತ್ಸವ ಮುಂದೆ ಇಂದು ಪುರವಂತರು ತಮ್ಮ ಕಲೆಗಳನ್ನು ಪ್ರದರ್ಶಿಸುವ ಮುಖಾಂತರ ಭಕ್ತರನ್ನು ಆಕರ್ಷಣೆ ಮಾಡಲಾಯಿತು ಇಂದು ನಡೆದ ಮಹಾರಥೋತ್ಸವದಲ್ಲಿ ಯಾವುದೇ ಅನಾಹುತ ಅಹಿತಕರ ಘಟನೆ ನಡೆಯಬಾರದೆಂದು ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ರೂಪಾಲಿ ಗೂಡುಡಗಿ ಮತ್ತು ಸಿಬ್ಬಂದಿಗಳು ಸೂಕ್ತ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತು