ಆರ್‌.ಎಸ್‌. ಹೂಗಾರಕೂಡ ಸ್ಮರಣೆಯ ಹಿನ್ನೆಲೆ ಪ್ರಶಸ್ತಿ ಹಾಗೂ ಕಲಿಕಾ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ : ಜಿ. ಕೆ.ಆದಪ್ಪಗೌಡರ

ಆರ್‌.ಎಸ್‌. ಹೂಗಾರಕೂಡ ಸ್ಮರಣೆಯ ಹಿನ್ನೆಲೆ ಪ್ರಶಸ್ತಿ ಹಾಗೂ ಕಲಿಕಾ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ : ಜಿ. ಕೆ.ಆದಪ್ಪಗೌಡರ R.S. Hoogarakuda Memorial Award and Educational Incentive Fund are commendable: G. K. Adappagowda

ಲೋಕದರ್ಶನ ವರದಿ

ಧಾರವಾಡ 15 : ನಿಸ್ವಾರ್ಥ ಭಾವದಿಂದ ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮನುಷ್ಯರೆ ಮಹಾಮಾನವರಾಗಿ ರೂಪುಗೊಳ್ಳುತ್ತಾರೆ. ಮನುಷ್ಯ ತಾನು ಮಾಡಿದ ಸತ್ಕಾರ್ಯಗಳ ಮೂಲಕ ಜನಮಾನಸದಲ್ಲಿ ಉಳಿಯುತ್ತಾನೆ. ಇಂತಹ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಆರ್‌.ಎಸ್‌. ಹೂಗಾರಕೂಡ ಒಬ್ಬರು. ಅವರ ಸ್ಮರಣೆಯ ಹಿನ್ನೆಲೆಯಲ್ಲಿ ಪ್ರಶಸ್ತಿ ಹಾಗೂ ಕಲಿಕಾ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದು ಹುಬ್ಬಳ್ಳಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಮಂಡಳಿ ಅಧ್ಯಕ್ಷರಾದ ಜಿ. ಕೆ.ಆದಪ್ಪಗೌಡರ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಆರ್‌.ಎಸ್‌. ಹೂಗಾರದತ್ತಿ ಅಂಗವಾಗಿ ಆಯೋಜಿಸಿದ್ದ ‘ದಿ. ಆರ್‌.ಎಸ್‌.ಹೂಗಾರ ಸೇವಾರತ್ನ ಪ್ರಶಸ್ತಿ-2026’ ಪ್ರದಾನ ಹಾಗೂ ಕಲಿಕಾ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಣ್ಣೀಗೇರಿಯ  ಲಿಂಗಮ್ಮ ಹೂಗಾರ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಎಸ್‌. ಎಸ್‌. ಹರ್ಲಾಪೂರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದಆರ್‌. ಎಸ್‌. ಹೂಗಾರ ಅವರು ಕಷ್ಟ ಕಾರ​‍್ಪಣಯಗಳನ್ನು ಅನುಭವಿಸಿ, ಛಲಗಾರಿಕೆಯಿಂದ ಸಾಧನೆ ಮಾಡಿ, ಉನ್ನತ ಹುದ್ದೆಯನ್ನು ಅಲಂಕರಿಸಿ ಮುಂದೆ ಬಂದವರು.

       ಬೇರೆಯವರು ನೀಡಿದ ಹಣದ ಸಹಾಯದಿಂದ ಶಿಕ್ಷಣ ಪಡೆದಅವರ ಹೆಸರಿನಲ್ಲಿ ನೀಡುತ್ತಿರುವ ಕಲಿಕಾ ಪ್ರೋತ್ಸಾಹಧನ ಪಡೆದ ವಿದ್ಯಾರ್ಥಿಗಳು ಮುಂದೊಂದು ದಿನ ಅವರಂತೆಯೆ ಉನ್ನತಿಗೆ ಏರಲು ಸಹಾಯಕವಾಗುತ್ತದೆ ಎಂದು ಹೇಳಿ, ಇವತ್ತಿನ ವಾತಾವರಣದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳ ಮನಸ್ಸಿನಲ್ಲಿ ಏನನ್ನು ಬಿತ್ತುತ್ತಿದ್ದೇವೆ? ತುತ್ತು ಮಾಡಿ ಉಣಿಸುತ್ತಿದ್ದ ತಾಯಿಗೆ ಇಂದು ಎಷ್ಟೋ ಮಕ್ಕಳು ತುತ್ತು ಅನ್ನಕೊಡಲಾರದ ಸ್ಥಿತಿ ನಿರ್ಮಾಣವಾದುದು ಖೇದದ ಸಂಗತಿ. ಮರೆಯಾಗುತ್ತಿರುವ ಆದರ್ಶ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದು ಇಂದಿನ ಅಗತ್ಯವಾಗಿದೆ. ಹೆತ್ತತಂದೆ, ತಾಯಿ, ಹಿರಿಯರಿಗೆ ಗೌರವ ಕೊಡುವ ಮನಸ್ಥಿತಿಯನ್ನು ನಿರ್ಮಾಣ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. 

ಪ್ರಶಸ್ತಿ ಸ್ವೀಕರಿಸಿ ಮಾತನಮಾಡಿದ ಹಿರಿಯ ಲೆಕ್ಕಪರಿಶೋಧಕ ಕೆ.ನಾಗರಾಜಅವರು, ಲೆಕ್ಕ ತಪಾಸಣೆಯಲ್ಲಿ ಆಗಿರುವ ಲೋಪದೋಷಗಳನ್ನು ತೋರಿಸಿ, ಸರಿಪಡಿಸಿಕೊಳ್ಳಲು ಸೂಚಿಸುವುದು ಲೆಕ್ಕ ಪರಿಶೋಧಕನ ಕಾಯಕ ಅಂತಹ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ಹೆಸರುವಾಸಿಯಾಗಿದ್ದ ದಿ. ಆರ್‌.ಎಸ್‌.ಹೂಗಾರಅವರ ಹೆಸರಿನಲ್ಲಿ ಕೊಡಮಾಡಿದ ಪ್ರಶಸ್ತಿ ನನಗೆ ಅತೀವ ಸಂತೋಷವಾಗಿದ್ದು ಕೃತಜ್ಞತೆ ಸಲ್ಲಿಸುವೆ ಎಂದರು. ವಿವಿಧ ಶಾಲೆಯ ಏಳು ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನ ನೀಡಲಾಯಿತು. 

ಡಾ. ಜಿನದತ್ತ ಅ. ಹಡಗಲಿ ಸ್ವಾಗತಿಸಿದರು, ಪ್ರಿ. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಂಕರ ಕುಂಬಿ ನಿರೂಪಿಸಿದರು. ಶಂಕರ ಹಲಗತ್ತಿ ಅತಿಥಿಗಳನ್ನು ಪರಿಚಯಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಸತೀಶ ತುರಮರಿ, ವಿದ್ಯಾರ್ಥಿಗಳ ಪಾಲಕರು, ಅಣ್ಣಿಗೇರಿಯಿಂದ ಆರ್‌.ಎಸ್‌.ಹೂಗಾರ ಅಭಿಮಾನಿಗಳು, ಪರಿವಾರದವರು ಇದ್ದರು.