ತಲವಾರ್‌ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
March 06, 2026 07:52 AM | By Admin
Fatal attack by Talwar: 7 people arrested for attempted murder, search underway for two
ಬೆಳಗಾವಿ : ಸಂಕೇಶ್ವರ ಪಟ್ಟಣದಲ್ಲಿ ದಿ. 23ರಂದು ತಡರಾತ್ರಿ ವ್ಯಕ್ತಿಯ ಮೇಲೆ ತಲವಾರನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಎಸ್ ಪಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಬೆಳಗಾವಿಯ ತಮ್ಮ ಕಚೇರಿಯಲ್ಲಿ ಬುಧವಾರ ಸಂಜೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕೇಶ್ವರ ಪಟ್ಟಣದಲ್ಲಿ 23ರಂದು ತಡರಾತ್ರಿ ದತ್ತಾತ್ರೇಯ ಥೋರವತ್ ಎಂಬುವ ವ್ಯಕ್ತಿಯ ವಾಹನವನ್ನು ಅಡ್ಡಗಟ್ಟಿ ತಲವಾರನಿಂದ ಮಾರಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೆ ಯತ್ನ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಶ್ಯಾಮರಾವ @ ಶ್ಯಾಮ ಮೋಹನ ಯಾದವ (ಸಾ: ಸಂಕೇಶ್ವರ ತಾ: ಹುಕ್ಕೇರಿ), ಸಮೀರ ತುಕಾರಾಮ ಪಾಟೀಲ (ಸಾ: ಹನುಮಾನ ನಗರ ಸಂಕೇಶ್ವರ ತಾ: ಹುಕ್ಕೇರಿ), ಸುನೀಲ ಅಶೋಕ ಪಾಂಡವ (ಸಾ: ಹಾಥಕಣಗಲಾ ತಾ: ಹಾಥಕಣಗಲಾ ಜಿ: ಕೊಲ್ಲಾಪೂರ ಮಹಾರಾಷ್ಟöç), ಸೂರಜ ಬಾಳಾಸಾಹೇಬ ವೈದ್ಯ (ಸಾ: ಕಬನೂರ ತಾ: ಹಾಥಕಣಗಲಾ ಜಿ: ಕೊಲ್ಲಾಪೂರ ಮಹಾರಾಷ್ಟöç), ಸಂಕೇತ ಉಮೇಶ ಮೇತ್ರಿ (ಸಾ: ಇಚಲಕರಂಜಿ ತಾ: ಹಾಥಕಣಗಲಾ ಜಿ: ಕೊಲ್ಲಾಪೂರ), (ಅಶೋಕ ವಿಲಾಸ ಪಾಟೀಲ ಸಾ: ಹರಗಾಪೂರಗಡ ತಾ: ಹುಕ್ಕೇರಿ), ಸಂತೋಷ ದೋಂಡಿಬಾ ಶೇಲಾರ (ಸಾ: ಪಡ್ಲಿಹಾಳ ತಾ: ನಿಪ್ಪಾಣಿ ಹಾಲಿ ಹರಗಾಪೂರಗಡ ತಾ: ಹುಕ್ಕೇರಿ) ಹೀಗೆ ಒಟ್ಟು 7 ಜನ ಆರೋಪಿತರಿಗೆ ಬಂದಿಸಲಾಗಿದೆ. ಆರೋಪಿತರ ಕಡೆಯಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ತಲವಾರ, 03 ಮೊಬೈಲಗಳನ್ನು, ಅಲ್ಲೋ ಕಾರ ಜಪ್ತ ಮಾಡಿದ್ದು ಪರಾರಿಯಾಗಿರುವ ಇನ್ನಿಬ್ಬರ ಆರೋಪಿತರ ಶೋಧ ಕಾರ್ಯ ಹಾಗೂ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.
24ರಂದು ಗಡಹಿಂಗ್ಲಜ ಹತ್ತರಕಿ ಆಸ್ಪತ್ರೆಯಲ್ಲಿ ಫಿಲ್ಯಾದಿದಾರರಾದ ಶ್ರೀಕಾಂತ @ ಪಿಂಟು ದತ್ತಾ ಪರೀಟ (ಸಂಕೇಶ್ವರ) ದೂರು ನೀಡಿದಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿ ಇರುತ್ತದೆ. ದತ್ತಾತ್ರೇಯ ಶ್ರೀಕಾಂತ ಥೋರವತ, ಇವರಿಬ್ಬರೂ ತಮ್ಮ ತಮ್ಮ ಮೋಟಾರ್ ಸೈಕಗಳ ಮೇಲಿಂದ ಸಂಕೇಶ್ವರ ನಿಡಸೋಸಿ ರಸ್ತೆಯ ಬದಿಗೆ ಇರುವ ಶ್ರೀ ಸಾಯಿ ಮಂಗಲ ಕಾರ್ಯಾಲಯದಿಂದ ಸಂಕೇಶ್ವರ ಕಡೆಗೆ ಬರುತ್ತಿದ್ದಾಗ ನಿಡಸೋಸಿ ಕಡೆಯಿಂದ ಯಾವುದೋ ಕಾರಿನಲ್ಲಿ ಯಾರೋ ನಾಲ್ಕು ಜನರು ಬಂದು ದತ್ತಾತ್ರೇಯ ಥೋರವತ್ ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಮೋಟಾರ್ ಸೈಕಲಕ್ಕೆ ಹಿಂದಿನಿAದ ಹಾಯಿಸಿ ಅವನಿಗೆ ಕೆಳಗೆ ಕೆಡವಿ ತಲವಾರಗಳಿಂದ ಅವನ ಕುತ್ತಿಗೆಗೆ ಮತ್ತು ಬಲಗೈ ಮುಂಗೈಗೆ ಹೊಡೆದು ಗಂಭೀರ ಗಾಯಗಳನ್ನು ಪಡಿಸಿ ಕೊಲೆ ಮಾಡಲು ಪ್ರಯತ್ನ ಪಟ್ಟಿರುತ್ತಾರೆ ಅಂತಾ ದೂರು ನೀಡಿದ್ದಾರೆ.
ಈ ಕುರಿತು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 60/2026 ಕಲಂ: 109 ಸಹಕಲಂ 3(5) ಬಿ.ಎನ್.ಎಸ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇತ್ತು. ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡು ಈ ಪ್ರಕರಣದಲ್ಲಿ ಈ ಮೊದಲು ಸಂಕೇಶ್ವರ ಪಟ್ಟಣದ ಸಮೀರ ತುಕಾರಾಮ ಪಾಟೀಲ ಇವನು ಸಂಘಟನೆಗಳ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿಕೊಳ್ಳುತ್ತಿದ್ದನು. ಆದರೆ ಈಗ ಸದ್ಯ ಗಾಯಾಳು ದತ್ತಾತ್ರೇಯ ಶ್ರೀಕಾಂತ ಥೋರವತ ಇತನು ಸಮೀರ ಇತನಿಗೆ ಹಿಂದೆ ಸರಿಸಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿಕೊಳ್ಳುತ್ತಾ ಬಂದಿದ್ದರಿAದ ಅಲ್ಲಂದ ಇಲ್ಲಿಯವರೆಗೆ ದ್ವೇಷ ಸಾಧಿಸುತ್ತಾ ಬಂದಿದ್ದು, ಈ ಕಾರಣಕ್ಕಾಗಿ ಸಂಕೇಶ್ವರ ಪಟ್ಟಣದ ಶ್ಯಾಮರಾವ ಯಾದವ ಇವನಿಗೆ ಮುಂದೆ ಇಟ್ಟುಕೊಂಡು ಸಮೀರ ಇವನು ದತ್ತಾತ್ರೇಯ ಥೋರಾವತ ಇವನ ವಿರುದ್ಧ ಪ್ರಚೋದನೆ ಮಾಡುತ್ತಾ ಬಂದಿರುತ್ತಾನೆ ಹಾಗೂ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಮುಂದಿನ ದಿನಗಳಲ್ಲಿ ತಾನೇ ನೇತೃತ್ವ ವಹಿಸಬೇಕು ಅಂತಾ ಅಂದುಕೊAಡಿರುತ್ತಾನೆ.
ಅದರಂತೆ ಈ ವಿಷಯವನ್ನು ಶ್ಯಾಮ ಯಾದವ ಇತನ ಜೊತೆ ಚರ್ಚಿಸಿರುತ್ತಾನೆ. ಹಾಗೂ ಶ್ಯಾಮರಾವ ಮತ್ತು ರಾಕೇಶ ಕಾಮಕರ ಇಬ್ಬರ ನಡುವೆ ಜಗಳ ಆಗಿ ರಾಕೇಶ ಕಾಮಕರ ಇವನು ಗಡಹಿಂಗ್ಲಜ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು, ರಾಕೇಶ ಕಾಮಕರ ಇವನಿಗೆ ದತ್ತಾತ್ರೇಯ ಇವನು ಸಪೋರ್ಟ ಮಾಡುತ್ತಿದ್ದರಿಂದ ಶ್ಯಾಮ ಇತನು ಕೂಡ ದತ್ತಾ ಥೋರಾವತ ವಿರುದ್ಧ ದ್ವೇಷ ಕಾರುತ್ತಾ ಇರುತ್ತಾನೆ.
ಈ ಎಲ್ಲ ಕಾರಣಗಳಿಂದ ದತ್ತಾತ್ರೇಯ ಥೋರಾವತ ಇವನಿಗೆ ಒಂದು ಗತಿ ಕಾಣಿಸಿ ಬಿಟ್ಟರೆ ರಾಕೇಶ ಕಾಮಕರ ಇವನು ಸಹ ಸುಮ್ಮನೇ ಕೂಡುತ್ತಾನೆ ಅಂತಾ ತಿಳಿದು ನಂತರ ಇವರಿಬ್ಬರು ಕೂಡಿ ಹರಗಾಪೂರದ ಸಮೀರ ಇತನ ಸ್ವಂತ ಪಾರ್ಮನಲ್ಲಿ ಕೃತ್ಯವೆಸಗುವ ಸಲುವಾಗಿ ಇಬ್ಬರು ಆರೋಪಿತರಾದ ಸುನೀಲ ಹಾಗೂ ಸೂರಜ ಇವರಿಗೆ ಮಹಾರಾಷ್ಟöçದ ಹಾಥಕಣಗಲಾದಿಂದ ಕರೆಯಿಸಿಕೊಂಡು ಆಶ್ರಯ ನೀಡಿ ಹತ್ಯೆಗೆ ಸಂಚು ರೂಪಿಸಿದ್ದು ಇರುತ್ತದೆ. ನಂತರ ದತ್ತಾತ್ರೇಯ ಥೋರಾವತ ಇವನ ಮೇಲೆ ಹಲ್ಲೆ ಮಾಡುವ ದಿನ ದಿ. 23/02/2026 ರಂದು ಮತ್ತೆ ಇಬ್ಬರು ವ್ಯಕ್ತಿಗಳನ್ನು ಇಚಲಕರಂಜಿಯಿAದ ಕರೆಯಿಸಿಕೊಂಡಿದ್ದು ಇರುತ್ತದೆ. ಹೀಗೆ ಒಟ್ಟು 05 ಜನರು ಸೇರಿ ಕಾರಲ್ಲಿ ಹೋಗಿ ಹೊಂಚು ಹಾಕಿ ಮರಣಾಂತಿಕ ಹಲ್ಲೆ ನಡೆಸಿ ಕೃತ್ಯವೆಸಗಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ ಪಿ ರಾಮರಾಜನ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಕಾಕ ಡಿಎಸ್‌ಪಿ ನಾಯಕ, ಯಮಕನಮರಡಿ ಸಿಪಿಐ ಜಾವೀದ್ ಮುಶಾಪೂರೆ ಸೇರಿದಂತೆ ಅನೇಕ ಪೊಲೀಸ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್‌ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 