ಮಾ-28 ರಿಂದ ಏ-06 ರವರಿಗೆ ಪುರಸಿದ್ಧೇಶ್ವರ ದೇವಸ್ಥಾನ ರಥೋತ್ಸವ ಜರುಗಲಿದೆ
Purasidheshwara Temple Chariot Festival to be held from March 28 to April 6
ಮಾ-28 ರಿಂದ ಏ-06 ರವರಿಗೆ ಪುರಸಿದ್ಧೇಶ್ವರ ದೇವಸ್ಥಾನ ರಥೋತ್ಸವ ಜರುಗಲಿದೆ
ಹಾವೇರಿ 26: ಯಾಲ್ಲಕ್ಕಿ ಕಂಪಿನ ಹಾವೇರಿ ನಗರದ ಪುರಸಿದ್ಧೇಶ್ವರ ದೇವಸ್ಥಾನ ರಥೋತ್ಸವ ಮಾ-28 ರಿಂದ ಏ-06 ರವರಿಗೆ ಜರುಗಲಿದೆ. ದಿ,28 ರಂದು ಶುಕ್ರವಾರ ರಾತ್ರಿ 7 ಘಂಟೆಗೆ ಪುರಸಿದ್ಧೇಶ್ವರ ಮೂರ್ತಿಗೆ ಕಂಕಣಧಾರಣೆ, ದಿ,29 ಶನಿವಾರ ಪುರಸಿದ್ಧೇಶ್ವರ ಮೂರ್ತಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಗಣಂಗಳ, 8 ಘಂಟೆಗೆ ಪ್ರಸಾದ ದಾಸೋಹ, ದಿ,30 ರವಿವಾರ ಪುರಸಿದ್ಧೇಶ್ವರ ಮೂರ್ತಿಗೆ ರುದ್ರಾಭಿಷೇಕ ನಂತರ ಗುಗ್ಗಳ ಜೊತೆಗೆ ಹೂವಿನ ತೇರು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಪುರಸಿದ್ಧೇಶ್ವರ ದೇವಸ್ಥಾನಕ್ಕೆ ಮುಂಜಾನೆ 11 ಘಂಟೆಗೆ ತಲುಪುವುದು. 12-32 ಕ್ಕೆ ವಿವಿಧ ಮಠಗಳ ಶ್ರೀಗಳ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಅನ್ನಸಂತರೆ್ಣ ಜರುಗುವುದು. ಸಾಯಂಕಾಲ 6-40 ಗಂಟೆಗೆ ವಿಜೃಂಭಣೆಯಿಂದ ಪುರಸಿದ್ಧೆಶ್ವರ ರಥೋತ್ಸವ ಸಕಲ ವಾಧ್ಯ ವೈಭವಗಳೊಂದಿಗೆ ಹೊರಡುವುದು.ದಿ,31 ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಲ್ಲದ ಬಂಡಿಯು ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಪುರಸಿದ್ಧೇಶ್ವರ ದೇವಸ್ಥಾನದವರಿಗೆ ತಲುಪುವುದು.ದಿ,1 ರಂದು ಮಂಗಳವಾರ ಸಾಯಂಕಾಲ 6-30 ಗಂಟೆಗೆ ವಿವಿಧ ಧಾರ್ಮಿಕ ಕಾಯರ್ಯಕ್ರಮ ಜರುಗುವವು.ದಿ,2 ಬುಧವಾರ ಸಾಯಂಕಾಲ ಧಾರ್ಮಿಕ 6-30 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ದಿ,4 ಮತ್ತು 5 ರಂದು ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಗೆ ಕುಸ್ತಿ ಸ್ಪರ್ಧೆಗಳು ಜರುಗುವವು. ದಿ,6 ರಂದು ಮಧ್ಯಾಹ್ನ 4 ಗಂಟೆಗೆ ಕುಸ್ತಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುರಸಿದ್ಧೇಶ್ವರ ದೇವಸ್ಥಾನ ರಥೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ದೇವಸ್ಥಾನ ಸಮಿತಿ ಪ್ರಕಟಣೆ ಕೋರಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 