ಹೂವಿನ ಹಡಗಲಿ

ಮೈಲಾರ ಕಾರ್ಣಿಕ ಜಾತ್ರೆ,ದರ್ಶನಕ್ಕೆ ಸಾರ್ವಜನಿಕರಿಗೆ ನಿಷೇಧ

ಮೈಲಾರ ಕಾರ್ಣಿಕ ಜಾತ್ರೆ,ದರ್ಶನಕ್ಕೆ ಸಾರ್ವಜನಿಕರಿಗೆ ನಿಷೇಧ

ಹೂವಿನಹಡಗಲಿ :06 ಹಿ ತಾಲೂಕಿನ ಸುಕ್ಷೇಥ್ರ ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕೋತ್ಸವ ಹಾಗೂ ಕುರುವತ್ತಿ ಮಲ್ಲಿಕಾರ್ಜುನ, ಬಸವೇಶ್ವರ ಸ್ವಾಮಿಯ ಜಾತ್ರೆಗೆ ಹೆಚ್ಚಿನ ಜನ ಸಂದಣಿ ನಿಯಂತ್ರಣ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದರ್ಶನವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ಗುರುವಾರ ಆದೇಶಹೊರಡಿಸಿದ್ದಾರೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್‌.ಪ್ರಕಾಶರಾವ್ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. 

ಸರ್ಕಾರ ಆದೇಶದ ಮೂರನೇ ಅಲೆ ನಿಯಂತ್ರಣ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೋಕು ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲು ಫೆ.8ರಿಂದ 19ರವರೆಗೆ ನಡೆಯಲಿರುವ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಜಾತ್ರೆಯ ಕಂಕಣ ಧಾರಣೆ,ಹುಣ್ಣಿಮೆ, ಕಾರ್ಣಿಕೋತ್ಸವ ,ಸರಪಳಿ ಪವಾಡ ಹಾಗೂ ಇನ್ನಿತರೆ ಧಾರ್ಮಿಕ ಕಾರ‌್ಯಕ್ರಮಗಳು ಜರುಗಲಿವೆ.  

ಫೆ.25ರಿಂದ ಮಾ.3ರವೆರೆಗೆ ಕುರುವತ್ತಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತಾಧಿಗಳು ,ದಾವಣಗೆರೆ, ಹಾವೇರಿ,ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ,ಗದಗ ಸೇರಿದಂತೆ ನಾನಾ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯಗಳಿಂದ ಸೇರುವ ಹಿನ್ನೆಲೆಯಲ್ಲಿ ದರ್ಶನ, ಕಾರ್ಣಿಕೋತ್ಸವ ,ರಥೋತ್ಸವ ಮತ್ತು ಜಾತ್ರೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ. 

ದೇವಸ್ಥಾನ ಆಡಳಿತ ಮಂಡಳಿ ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ ,ಪ್ರತಿದಿನ ಪೂಜಾ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಜಾತ್ರಾ ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ.ಆದೇಶ ಉಲ್ಲಂಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಅನ್ವಯ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ .  


ಸುದ್ದಿ ಓದಿ