ಒಣಗಿದ ಗಿಡ ತೆಗೆಯುವಂತೆ ಪಶು ವೈದ್ಯರಾದ ಡಾ ಎನ್ ಹೆಚ್ ಓಲೆಕಾರ್ ಅವರಿಗೆ ಸಾರ್ವಜನಿಕರ ಮನವಿ
Public appeal to veterinarian Dr. N. H. Olekar to remove dried plants
ಲಕ್ಷ್ಮೇಶ್ವರ 10 : "ಪಟ್ಟಣದ ಹೊಸ ಬಸ್ ನಿಲ್ದಾಣ ಎದುರುಗಡಯ ಪಶು ಆಸ್ಪತ್ರೆಯ ಕಾಂಪೌಂಡ್ ಒಳಗಡೆ ಇರುವ ಎರಡು ಗಿಡಗಳು ಸಂಪೂರ್ಣವಾಗಿ ಒಣಗಿ ಯಾವ ಹಂತದಲ್ಲಿ ಬೀಳುತ್ತವೆ ಎಂಬ ಆತಂಕದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾರೆ ಹಾಗೂ ಇದೆ ಒಣಗಿದ ಗಿಡದ ಕೆಳಗಡೆ ಬಡವರು ಸಣ್ಣ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಅವರಿಗೆ ಸಹ ಗಿಡ ಯಾವಾಗ ಬೀಳುತ್ತವೆ ಎಂಬ ಭಯ ಕಾಡುತ್ತಿದೆ ಅದರಲ್ಲಿ ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು ಗಾಳಿ ಮಳೆ ಜೋರಾಗಿ ಬೀಳುತ್ತಿದೆ ಇದರಿಂದ ಒಣಗಿದ ಗಿಡಗಳು ಯಾವಾಗ ಬೀಳುತ್ತವೆ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ.
ಅದು ಅಲ್ಲದೆ ಗ್ರಾಮೀಣ ಪ್ರದೇಶಗಳಿಂದ ಜನರು ತಮ್ಮ ವ್ಯಾಪಾರಿ ವಾಟುಗಳಿಗೆ ಬರುತ್ತಾರೆ ಇದೇ ರಸ್ತೆಯ ಮುಖಾಂತರ ತಮ್ಮ ವಾಹನ ತಗೊಂಡು ಹೋಗುತ್ತಾರೆ ಅಂತ ಸಂದರ್ಭದಲ್ಲಿ ಒಣಗಿದ ಎರಡು ಗಿಡಗಳು ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ ಅದಕ್ಕಾಗಿ ತಾವುಗಳು ಯಾವುದೇ ಅನಾಹುತಗಳು ಸಂಭವಿಸುವ ಮುನ್ನ ಅವುಗಳನ್ನು ತೆರವುಗೊಳಿಸಬೇಕು ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಹ ಫೋನ್ ಮುಖಾಂತರ ಮಾಹಿತಿ ನೀಡಲಾಗಿದೆ ಇನ್ನಾದರೂ ಪಶು ವೈದ್ಯರು ತಮ್ಮ ಆಸ್ಪತ್ರೆ ಕಾಂಪೌಂಡ್ ಒಳಗಡೆ ಇರುವ ಒಳಗಿದ ಎರಡು ಗಿಡಗಳನ್ನು ತೆರೆಗೊಳಿಸಲು ಮುಂದಾಗಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗುತ್ತಿರಿ ಎಂದು ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿದ ಸಣ್ಣಸಣ್ಣ ಡಬ್ಬಿ ಅಂಗಡಿಯ ಬಡ ವ್ಯಾಪಾರಿಗಳಾದ ಸೋಮಣ್ಣ ನಂದೆಣ್ಣವರ ಎಸ್ ಜಿ ಯಲಿಗಾರಅವರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 