ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ
ಹೂವಿನಹಡಗಲಿ 23: ಎಸ್ಸಿ-ಎಸ್ಟಿ ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಹಾಗೂ ನಿವೃತ್ತ ನ್ಯಾಯಾಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ರವರ ಆಯೋಗದ ವರದಿ ಜಾರಿಗೆ ಪಟ್ಟಣದಲ್ಲಿ ಸೋಮವಾರ ಇಲ್ಲಿನ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಾಳ ಹೋರಾಟ ಸಮಿತಿಯಿಂದ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಜರುಗಿತು.
ಪಟ್ಟಣದ ಮೈಲಾರಲಿಂಗೇಶ್ವರ ದೇಗುಲದಿಂದ ಪ್ರಮುಖ ರಸ್ತೆಗಳ ಮೂಲಕ ಹೊರಟ ಮೆರವಣಿಗೆ ಶಾಸ್ತಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೋರಾಟ ಸಮಿತಿ ಮುಖಂಡರಾದ ಜಿ.ಬುಳ್ಳಪ್ಪ,ಉಚ್ಚಂಗೆಪ್ಪ,ಕಠಾರಿನಾಯ್ಕ,ಪುತ್ರೇಶ,ಊಳಿಗದ ಹನುಮಂತಪ್ಪ, ಪರಸಪ್ಪ,ದೀಪದಕೃಷ್ಣ ಮಾತನಾಡಿ ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನದ ಆಶಯದಂತೆ ಮೀಸಲಾತಿ ಪ್ರಮಾಣ ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.03ರಿಂದ 7.5ಕ್ಕೆ ಹೆಚ್ಚಿಸಲು ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಾಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಆಯೋಗದ ವರದಿಯನ್ನು ಕೂಡಲೇ ಜಾರಿಮಾಡಬೇಕು ಜತೆಗೆ ಆಯೋಗದ ವರದಿಯನ್ನು ಸುಭಾಷ ಅಡಿಯವರ ತ್ರಿಸದಸ್ಯ ಸಮಿತಿ ಒಪ್ಪಿಸಿರುವುದನ್ನು ಕೂಡಲೇ ವಾಪಾಸ್ಸು ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ನಂತರ ಬೇಡಿಕೆ ಈಡೇರಿಕೆಯ ಮನವಿಯನ್ನು ತಹಶೀಲ್ದಾರ ಪ್ರತಿಭಾ ಅವರ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಎಲ್.ಜಿ.ಹೊನ್ನಪ್ಪ,ಎಸ್.ಕೊಟ್ರೇಶ, ವಸಂತ, ಕೋಟೆಪ, ವಿಲ್ಸನ್ ಸ್ವಾಮಿ, ಪಿ.ನಿಂಗಪ್ಪ, ಎಂ.ಮಂಜುನಾಥ, ಕೆ.ನಾಗರಾಜ,ಸಿ.ಮಾಲತಿ,ಜ್ಯೋತಿ ಕನಕಮ್ಮ,ಸಿ.ಹೊನ್ನಮ್ಮ,್ಪ ಸೇರಿದಂತೆ ಮಹಿಳೆಯರು ನೂರಾರು ಜನರು ಭಾಗವಹಿಸಿದ್ದರು.