ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಸರಕಾರದ ನೀತಿ ಖಂಡಿಸಿ ನಾಗರೋಜಿಯಲ್ಲಿ ಪ್ರತಿಭಟನೆ
Protest in Nagaroji condemning the government's policy of closing government schools in the name of
ಲೋಕದರ್ಶನ ವರದಿ
ವಿಜಯಪುರ 14: ಕೆಪಿಎಸ್ ಮ್ಯಾಗ್ನೆಟ್‌ಯೋಜನೆ ವಿರೋಧಿಸಿ ಜಿಲ್ಲೆಯಐನಾಪುರದ ನಾಗರೋಜಿ ವಸ್ತಿ ಶಾಲೆಗಳನ್ನು ಉಳಿಸಬೇಕೆಂದು ಆಗ್ರಹಿಸಿ ಎಐಡಿಎಸ್ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆಯನ್ನು ಮಾಡಲಾಯಿತು. ಐನಾಪುರ ಮಹಲ್ ನ ನಾಗರೋಜಿ ವಸ್ತಿ ಶಾಲೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಆ ಶಾಲೆಯನ್ನು ಬುರಣಾಪುರಕೆಪಿಎಸ್ ಮ್ಯಾಗ್ನೆಟ್ ಗೆ ವೀಲೀನ ಗೊಳಿಸಿ ಮುಚ್ಚಲು ಹೊರಟಿರುವ ಸರಕಾರದ ನಡೆಯನ್ನು ಖಂಡಿಸಿ ಇಂದು ವಿದ್ಯಾರ್ಥಿಗಳು ಮತ್ತು ಪಾಲಕರು ಶಾಲೆಯ ಮುಂದೆ ಪ್ರತಿಭಟನೆಯನ್ನು ಮಾಡಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂತೋಷ ಭೀಮಶಿ ನಾಗರೋಜಿ ಮಾತನಾಡುತ್ತಾಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರದ ಹುನ್ನಾರವಾಗಿದೆ. ಮೊದಲುತೋಟದ ವಸ್ತಿ ಶಾಲೆಗಳನ್ನು ಪ್ರಾರಂಭಿಸುವಉದ್ದೇಶ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದುಎಂದು, ಈಗ ಇದೆ ವಸ್ತಿ ಶಾಲೆಗಳನ್ನು ಸರಕಾರ ಮುಚ್ಚಲು ಹೊರಟಿದೆ.2-3 ಕಿಲೋ ಮೀಟರ್‌ದೂರದಿಂದ ಮಕ್ಕಳು ಶಾಲೆ ಕಲಿಯಲುಇಲ್ಲಿಗೆ ಬರುವುದೇ ಕಷ್ಟ ಅಂತಹದರಲ್ಲಿಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಿದರೆ ಕಿಲೋಮೀಟರ್ ಹೇಗೆ ನಡೆದುಕೊಂಡು ಹೋಗಬೇಕಾಗುತ್ತದೆ.
ಸರಕಾರಿ ಶಾಲೆಗಳಲ್ಲಿ ಕಲಿತು ಎಷ್ಟೋ ಮಕ್ಕಳು ಡಾಕ್ಟರ್, ಇಂಜಿನಿಯರ್ ಹಾಗೂ ಪೋಲಿಸ್ ಆಗಿದ್ದಾರೆ.ಶಾಲೆಯನ್ನು ಮುಚ್ಚುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಪಾಲಕರುದುಡಿಯಲು ಹೋಗುತ್ತಾರೆಎಲ್ಲರಿಗೂ ಮಕ್ಕಳು ಶಾಲೆಗೆ ಕಳಿಸುವುದು ಮತ್ತುಕರೆದುಕೊಂಡು ಬರುವುದುತುಂಬಾ ಕಷ್ಟ, ಖಾಸಗೀ ಶಾಲೆಗೆ ಸೇರಿಸುವ ಶಕ್ತಿ ಇರುವುದಿಲ್ಲ. ಶಾಲೆಗಳಿಗಾಗಿ ನಾವು ಜಮೀನುದಾನ ಮಾಡಿದ್ದೇವೆ, ನಮ್ಮ ಮಕ್ಕಳ ಶಿಕ್ಷಣ ಮುಖ್ಯ ನಾವು ಯಾವುದೇಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ, ಒಂದು ವೇಳೆ ಮುಚ್ಚಿದರೆ ಮುಂದಿನ ದಿದಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆಎಂದು ಹೇಳಿದರು.
ಸಂಘಟನೆಯ ಮಲ್ಲಿಕಾರ್ಜುನ ಹೆಚ್ ಟಿ ಯವರು ಮಾತನಾಡುತ್ತಾ ಖಾಲಿಯಿರುವಂತಹ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಿ, ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಸರಕಾರಿ ಶಾಲೆಗಳಲ್ಲಿ ನೀಡಬೇಕು.40000 ಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚಿ ಪಂಚಾಯ್ತಿಗೊಂದು ಶಾಲೆ ಎಂಬಂತೆ ಕೇವಲ 6000 ಕೆ ಪಿ ಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆಇದನ್ನು ವಿರೋಧಿಸುತ್ತವೆ. ನಾವು ಪ್ರತಿಯೊಂದು ವಸ್ತುಗಳಿಗೂ ತೆರಿಗೆಕಟ್ಟುತ್ತೇವೆ. ನಾವು ಕಟ್ಟುವತೆರಿಗೆಎಲ್ಲಿ ಹೋಯಿತು.ಏಷಿಯನ್‌ಡೆವಲಪಮೆಂಟ್ ಬ್ಯಾಂಕಿನಲ್ಲಿ ಈಗಾಗಲೇ 2 ಸಾವಿರದಐನೂರುಕೋಟಿ ಸಾಲ ಪಡೆಯಲಾಗಿದೆಎಂದು ಹೇಳಿದರು.ನಂತರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನುರಚಿಸಲಾಯಿತು.
ಈ ಪ್ರತಿಭಟನೆಯಲ್ಲಿಊರಿನ ಪಾಲಕರಾದ ಭೀಮಣ್ಣ ರುಕ್ಮೋಜಿಗೋಳ್, ಖಂಡೋಬ ಖಾಡೆ, ಕೆಂಚಪ್ಪ ಬಳಗನೂರ, ಸೋಮಶೇಖರ್ ವಾಲಿಕರ್, ಮುದಕಪ್ಪ ಶಿವಣಗಿ, ಯಲ್ಲಪ್ಪ ರುಕ್ಮೋಜಿಗೋಳ್, ಅಶೋಕ್ ನಾಯಕ್, ಪರಶುರಾಮ ಬಳಗನೂರ, ಶಿವಾನಂದ ವಾಲಿಕರ್, ಮಲ್ಲಿಕಾರ್ಜುನ ತೋಳನೂರ್ ಸಂಘಟನೆಯಗೀತಾ ಹೆಚ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 