2ಎ ವರ್ಗದಿಂದ ಪರಿಶಿಷ್ಟ ಜಾತಿಗೆ ಸೇರಿ್ಡಸುವಂತೆ ಸರಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿ,
ಜಮಖಂಡಿ 08: ಪಂಡಾರ್, ಪೆಂಡಾರಿ,ಪೆಂಡಾರಾ ಸಮಾಜ ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದೆ. ಅತಿ ಹಿಂದುಳಿದ ಜನಾಂಗವಾಗಿದ್ದು ಹಿಂದುಳಿದ 2ಎ ವರ್ಗದಿಂದ ಪರಿಶಿಷ್ಟ ಜಾತಿಗೆ ಸೇರಿ್ಡಸಬೇಕೆಂದು ಸರಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ. ಗ್ರೇಡ್ 2 ತಹಶೀಲ್ದಾರ ಜೆ,ಸತೀಶಕುಮಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲಿಸಿ. ನಂತರ ಮಾತನಾಡಿದ ಅವರು. ಬಡತನದ ಸರಳತೆಯ ಜೊತೆಗೆ ಎಲ್ಲಾ ವರ್ಗದ ಜನತೆಯೊಂದಿಗೆ ಅರಿತು ಬೆರೆತು ಜೀವನ ನಡೆಸುವ ಸಮಾಜ ಕೋಮು ಸೌಹಾರ್ಧತೆಯಿಂದ ಜೀವನ ನಡೆಸಿತ್ತಿದೆ. ರಾಜ್ಯದಲ್ಲಿ ಸುಮಾರು 20 ರಿಂದ 25 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಶೈಕ್ಷಣಿಕ, ಆರ್ಥಿಕ, ಓದ್ಯೋಗಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ತಾಂತಿಕ ಶಿಕ್ಷಣ, ಇಂಜನಿಯರಿಂಗ್, ವೈದ್ಯಕೀಯ ಕೋರ್ಸಗಳಲ್ಲಿ ಪ್ರವೇಶ ಅತ್ಯಂತ ಕಡಿಮೆ ಪ್ರಮಾಣದ್ದು. ಐ.ಎ.ಎಸ್. ಐ.ಪಿ.ಎಸ್ ಆಗಿರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಶಿಕ್ಷಣವಿಲ್ಲದೆ ವಂಚಿತರಾಗುತ್ತಿದ್ದಾರೆ. ಇಸ್ಲಾಂ ಧರ್ಮೀಯರಲ್ಲಿ ಶೇಕಡ 30 ರಿಂದ 40 ರಷ್ಟು ಜನಾಂಗವಾಗಿರುವ ಪಂಡಾರ್, ಪೆಂಡಾರಿ, ಪೆಂಡಾರಾ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರೆ್ಡ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಖಿಜರಅಲಿ ಪೆಂಡಾರಿ, ನಬಿಸಾಬ ಪೆಂಡಾರಿ, ಇಸ್ಮಾಯಿಲ ಪೆಂಡಾರಿ, ಬದ್ರೂದ್ದಿನ ಪೆಂಡಾರಿ, ಇನಾಯತ ಪೆಂಡಾರಿ, ರಪೀಕ ಸೌದಾಗರ, ಫಾರೂಕ ಪೆಂಡಾರಿ ಹಾಜಿ ಇಸ್ಮಾಯಿಲ ಪೆಂಡಾರಿ, ಮಹ್ಮದ ಪೆಂಡಾರಿ, ಚಾಂದಸಾಬ ಬಾಗಣಿ, ಮೈಹಬೂಬ ಟೇಲರ್, ಸಾಕೀಬ ಪೆಂಡಾರಿ, ಸಾಹೀದ ಪೆಂಡಾರಿ, ಶಮಶೋದ್ದಿನ ಜಮಾದಾರ, ಇಕಬಾಲ್ ಶೇಖ, ಶಬ್ಬೀರ ಪೆಂಡಾರಿ. ಫಯಾಜ ಬೂದಿಹಾಳ, ಜಲೀಲ ಕುರೇಶಿ, ಇರಫಾನ ಪೆಂಡಾರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.