ಕೃಷಿ ಇಲಾಖೆ ಅಧಿಕಾರಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ,
ಜಮಖಂಡಿ07: ನಗರದ ಎ,ಜಿ,ದೇಸಾಯಿ ವತ್ತದಲ್ಲಿ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ, ತಾಲೂಕು ಘಟಕ ಸಹಯೊಗದಲ್ಲಿ ನಡೆದ ಮೃತ ವ್ಯಕ್ತಿಯ ಹೆಸರನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬಿಲ್ ಸಂದಾಯ ಮಾಡಿದ ಕೃಷಿ ಇಲಾಖೆ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಪ್ರಾರಂಭಿಸಿ, ಕೃಷಿ ಇಲಾಖೆಯವರಗೆ ಪಾದಯಾತ್ರೆಯ ನಡೆಸಿ ಪ್ರತಿಭಟನೆಯನ್ನು ನಡೆಸಿ, ಕೃಷಿ ಇಲಾಖೆಯ ಅಧಿಕಾರಿಗೆ ಮನವಿ ಸಲಿಸಿದರು.
ಗ್ರಾಮೀಣ ಅಭಿವೃದ್ಧಿ ಸಮಿತಿ ರಾಜ್ಯ ಸಮಿತಿ ಅಧ್ಯಕ್ಷ ಚಿನ್ನಪ್ಪಾ ಕುಂದರಗಿ ಮಾತನಾಡಿ, ಸರಕಾರ ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ನೂರು ದಿನಗಳ ಉದ್ಯೋಗ ಸಿಗಲಿ ಎಂಬ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಆದರೆ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಬದಲು, ನರೆಗಾ ಯೋಜನೆ ಅಡಿ ನಡೆದಿರುವ ಕಾಮಗಾರಿಯಲ್ಲಿ ಮೃತ ವ್ಯಕ್ತಿ ಹೆಸರಲ್ಲಿ ಕೂಲಿ ಹಣ ಸಂದಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಹಿಪ್ಪರಗಿ ಗ್ರಾಮದ ಶೇಖವ್ವ ಶಂಕರ ಜತ್ತಿ ಇವರ ಜಾಬ ಕಾರ್ಡ ನಂಬರ ಏಒ,01, 005, 025, 001/164 ಇವರು ಜುನ್ 27, 2021 ರಂದು ಮರಣ ಹೊಂದಿರುತ್ತಾರೆ. ಆದರೆ ಅವರ ಹೆಸರಿನ ಮೇಲೆ ಹೆಸರಿನಲಿ 01-10-2021 ರಿಂದ 07-10-2021 ರವರೆಗೆ ಕೂಲಿ ಹಣ ಸಂದಾಯ ಮಾಡುತ್ತಾ ಬಂದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಾದ ಡಾಟಾ ಎಂಟ್ರಿ ಆಪರೇಟರ್ ಹಾಗೂ ನರೇಗಾ ಯೋಜನೆ ಅನುಷ್ಠಾನ ಮಾಡುವ ಇಂಜಿನಿಯರ ಇವರನ್ನು ಕೆಲಸದಿಂದ ವಜಾ ಗೊಳಿಸಿ, ಇಲಾಖೆ ವಿಚಾರಣೆಗೆ ಗುರಿಪಡಿಸಬೇಕು. ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖೆಯಿಂದ ಕ್ರಿಮಿನಲ್ ದೂರು ದಾಖಲು ಮಾಡಿ ಕೆಲಸದಿಂದ ವಜಾ ಗೊಳಿಸಬೇಕು. ಇಲ್ಲದೆ ಹೋದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ಬಸವರಾಜ ಕಾಂಬಳೆ, ಗೌರವ ಅಧ್ಯಕ್ಷ ಶಂಕರಾನಂದ ಕೋಪರ್ಡೆ, ಕಾರ್ಯದರ್ಶಿ ರವಿ ಪತ್ತಾರ, ಖಜಾಂಚಿ ಬಸವರಾಜ ಬಡಿಗೇರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದರು.