ಕಾರ್ಮಿಕ ಜಂಟಿ ಸಮಿತಿಯಿಂದ ಪ್ರತಿಭಟನೆ
ಹೂವಿನ ಹಡಗಲಿ 29: ಇಲ್ಲಿನ ಮೈಲಾರಲಿಂಗೇಶ್ವರ ದೇಗುಲದಿಂದ ಹೊರಟ ಮೆರವಣಿಗೆ ಆಂಜನೇಯ ದೇಗುಲ ಆವರಣದಲ್ಲಿ ಕಾರ್ಮಿಕ ಜಂಟಿ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಅಗತ್ಯವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ,ಬ್ಯಾಂಕ್ ,ಅಂಚೆಕಚೇರಿ, ವಿಮಾಣ ನಿಲ್ದಾಣಗಳು,ರೈಲ್ವೆ,ವಿದ್ಯುತ್ ಭಾರತ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ ಇದು ಸರಿಯಲ್ಲ ಜತೆಗೆ ನರೇಗಾವನ್ನು ಪಟ್ಟಣಕ್ಕೆ ವಿಸ್ತರಿಸಬೇಕು,ಅಂಗನವಾಡಿ,ಆಶಾ,ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ, ಭದ್ರತೆ ,ಖಾತ್ರಿಪಡಿಸಬೇಕು,ಕಾರ್ಮಿಕ ಭವನ ಸ್ಥಾಪನೆ ಮಾಡಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಟಿಯುಸಿ ಸಂಚಾಲಕ ಹಲಗಿ ಸುರೇಶ್,ಶಾಂತರಾಜ ಜೈನ್, ಅಂಗನವಾಡಿ ಸಂಘಟನೆ ಅಧ್ಯಕ್ಷೆ ಬಿ.ಜಯಲಕ್ಷ್ಮಿ, ಕಾರ್ಯದರ್ಶಿ ಸವಿತಾ ಹರವಿ,ಎನ್.ಮಂಜುಳಾ, ಬಿಸಿಯೂಟ ಸಂಘಟನೆ ಅಧ್ಯಕ್ಷೆ ಹೆಚ್.ಅನುಸೂಯ, ಬಸವರಾಜ, ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ನಾಗಭೂಷಣರೆಡ್ಡಿ, ಕಾರ್ಯದರ್ಶಿ ಕೇಶವ, ದೇವದಾಸಿ ಸಂಘಟನೆ ಅಧ್ಯಕ್ಷೆ ಹೆಚ್.ದಂಡೆಮ್ಮ,ಶಬ್ಬೀರ್ ಭಾಷಾ ಸೇರಿದಂತೆ ನೂರಾರು ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.