ಹೂವಿನ ಹಡಗಲಿ

ಬೇಡಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಬೇಡಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಲೋಕದರ್ಶನ ವರದಿ 

ಹೂವಿನಹಡಗಲಿ 08:ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವಂತೆ ಸೇರಿದಂತೆ ನಾನಾ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮತ್ತು ಎಐಟಿಯುಸಿ ಸಂಘಟನೆಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

ಎಐಟಿಯುಸಿ ಜಿಲ್ಲಾ ಸಂಚಾಲಕ ಹಲಗಿ ಸುರೇಶ ಮಾತನಾಡಿ ಕಳೆದ 19ವರ್ಷದಿಂದ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಜೀವನ ಭದ್ರತೆ ಇಲ್ಲ, ತಿಂಗಳಿಗೆ ಕನಿಷ್ಠ 21000 ವೇತನ ಜಾರಿಗೆ ಗೊಳಿಸಿ ಅವರ ಕೆಲಸವನ್ನು ಖಾಯಂಗೊಳಿಸಿ ಎಂದು ಆಗ್ರಹಿಸಿದ ಅವರು ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದರು. 

ಸಂಘಟನೆ ಜಿಲ್ಲಾ ಸಂಚಾಲಕ ಶಾಂತರಾಜ್ ಜೈನ್ ಮಾತನಾಡಿ ಬಿಸಿಯೂಟ ತಯಾರಕರನ್ನು ಕಾರ್ಮಿಕ ಇಲಾಖೆ ವ್ಯಾಪತ್ತಿಗೆ ಒಳಪಡಿಸಬೇಕು, ನಿವೃತ್ತಿಯಾದವರಿಗೆ 2ಲಕ್ಷ ರೂ, ನೀಡಬೇಕು ಜತೆಗೆ ಮಾಸಿಕ ನಿವೃತ್ತಿ ಪಿಂಚಣಿ 3000 ರೂ ಜಾರಿಗೊಳಿಸಬೇಕೆಂದು ಕೇದ್ರ ಸರ್ಕಾರವನ್ನು ಆಗ್ರಹಿಸಿದರು. 

ನಾನಾ ಬೇಡಿಕೆಗಳ ಮನವಿಯನ್ನು ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಬಿಸಿಯೂಟ ತಯಾರಕರ ಫೆಡರೇಷನ ಅಧ್ಯಕ್ಷೆ ಹೆಚ್‌.ಅನುಸೂಯಮ್ಮ, ಉಪಾಧ್ಯಕ್ಷೆ ಲತಾ ಇಟ್ಟಿಗಿ, ಕಾರ‌್ಯದರ್ಶಿ ಪಿ.ಸುನೀತ ಉತ್ತಂಗಿ, ಖಜಾಂಚಿ ಕವಿತಾ ಸೇರದಿಂತೆ ನೂರಾರು ಬಿಸಿಯೂಟ ಕಾರ‌್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ