ಪ್ರೊ ಎಸ್. ವಿ ಪಟ್ಟಣಶೆಟ್ಟಿ ಅವರ 83ನೇ ಹುಟ್ಟು ಹಬ್ಬದ ಸಂಭ್ರಮ
Prof. S. V. Pattanashetty's 83rd birthday celebration
ಲೋಕದರ್ಶನ ವರದಿ
ಹುಬ್ಬಳ್ಳಿ 14: ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರ 83ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಾಗೂ ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರ ವಚನ ಸುಧೆ, ತುಪ್ಪದ ತಲೆಯವರು ಮತ್ತು ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ಎಂಬ ಮೂರು ಕೃತಿಗಳ ಲೋಕಾರೆ್ಣ ಗೊಂಡ ಶುಭ ಸಂದರ್ಭದಲ್ಲಿ ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರು, ಬಸವ ಕೇಂದ್ರದ ಕಾರ್ಯಾಧ್ಯಕ್ಷರು, ನಿವೃತ್ತ ಪ್ರಾಧ್ಯಾಪಕರು, ಸಾಹಿತಿಗಳು , ಹಿರಿಯರು, ಮಾರ್ಗದರ್ಶಕರು, ಹಿತೈಸಿಗಳಾದ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ್ಣ, ಗ್ರಂಥ ನೀಡಿ ಆತ್ಮೀಯವಾಗಿ ಹುಟ್ಟು ಹಬ್ಬದ ಶುಭ ಕೋರಿದರು.
ಹುತ್ಪೂರ್ವಕವಾಗಿ ಅಭಿನಂದಿಸಿದರು. ದೇವರು ಪ್ರೊ ಪಟ್ಟಣಶೆಟ್ಟಿ ಅವರಿಗೆ ಉತ್ತಮ ಆರೋಗ್ಯ ಭಾಗ್ಯ ನೀಡಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ನಿವೃತ್ತ ಪ್ರಾಚಾರ್ಯ ಡಾ ಲಿಂಗರಾಜ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್.ಎಂ.ಸಾತ್ಮಾರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಡಾ ಎಂ ಟಿ ಹೊಸಮನಿ, ಬಿ ಎಸ್ ಸೊಪ್ಪಿನ, ಶಂಕರ ಕೋಳಿವಾಡ, ದಾಕ್ಷಾಯಣಿ ಕೋಳಿವಾಡ,
ಪ್ರತಿಭಾ ಪಟ್ಟಣಶೆಟ್ಟಿ , ಗೀರೀಶ್ ಪಟ್ಟಣಶೆಟ್ಟಿ, ಭರತ್, ವಿಭವ , ಪ್ರಣವ, ಪ್ರಿಯಾ ಬಗಲಿ, ಡಾ ಪೂರ್ಣಿಮಾ ಬಗಲಿ, ಆರ್ ಸಿ ಹಲಗತ್ತಿ, ವಿ ಬಿ ನಿಟಾಲಿ, ವಿ ಜಿ ಪಾಟೀಲ್, ಚನ್ನಬಸಪ್ಪ ಧಾರವಾಡಶೆಟ್ಟರ್, ಪ್ರೊ ನಾಗವೇಣಿ, ಮೃತ್ಯುಂಜಯ ಮಟ್ಟಿ , ಎನ್ ಬಿ ಬೆಳ್ಳಿಗಟ್ಟಿ, ಬಿ ವಿ ಅಂಗಡಿ , ಪ್ರೊ ಎಸ್ ಆರ್ ಆಶಿ, ಕೆ ಎಸ್ ಇನಾಮತಿ , ಪ್ರಭು ಅಂಗಡಿ, ಪ್ರಭು ಶೆಟ್ಟರ್, ವಿಜಯ ಬಾಕಳೆ , ಡಾ ಬಸವಕುಮಾರ ತಲವಾಯಿ, ಬಸವರಾಜ ಹೊಸಕೇರಿ , ಮಲ್ಲಿಕಾರ್ಜುನ ಕಮ್ಮಾರ, ವೀರಣ್ಣ ಗೋವೇಶ್ವರ , ಬಸವರಾಜ್ ಯಕಲಾಸಪೂರ , ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರ ಸ್ನೇಹಿತರು, ಬಂಧುಗಳು, ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಕರ್ನಾಟಕ ಸರ್ಕಾರದ ಬಸವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ವೀರಣ್ಣ ರಾಜೂರ, ಅವರ ಮಾತುಗಳಲ್ಲಿ, ಪ್ರೊ ಎಸ್ ವಿ ಪಟ್ಟಣಶೆಟ್ಟಿ ಅವರು ಸಾತ್ವಿಕ ಶರಣ ಸಂಸ್ಕೃತಿ ಪರಂಪರೆಯಲ್ಲಿ ಹುಟ್ಟಿ ಬೆಳೆದ ಶರಣಜೀವಿ.
ಅವರದು ಬಸವತತ್ವನಿಷ್ಠ ಬದುಕು; ಶರಣತತ್ವನಿಷ್ಠ ಬರಹ. ಆದರ್ಶ ಶಿಕ್ಷಕರಾಗಿ, ಅಧ್ಯಯನಶೀಲ ಪ್ರಾಧ್ಯಾಪಕರಾಗಿ ಸುಸಂಸ್ಕೃತ ಜೀವನ ರೂಪಿಸಿಕೊಂಡ ಅವರು ಶರಣಧರ್ಮ-ಸಾಹಿತ್ಯ-ಸಂಸ್ಕೃತಿಗಳನ್ನು ಅಧ್ಯಯನ, ಮನನ, ಅನುಸಂಧಾನದ ಮೂಲಕ ತಮ್ಮ ಪ್ರಾಣಜೀವಾಳವಾ ಗಿಸಿಕೊಂಡವರು. ಸಮಾಜ ಜೀವಿಗಳು , ಉತ್ತಮ ಸಂಘಟಕರು ಆದ ಅವರು ಹುಬ್ಬಳ್ಳಿ ಬಸವ ಕೇಂದ್ರವನ್ನು ಉಳಿಸಿ ಬೆಳೆಸುವಲ್ಲಿ, ತನ್ಮೂಲಕ ಬಸವಾದಿ ಶರಣರ ತತ್ವಾಚರಣೆ -ಸಂದೇಶ-ಜೀವನ್ ಮೌಲ್ಯಗಳನ್ನು ಜನಮನಕ್ಕೆ ತಲುಪಿಸುವಲ್ಲಿ ನಿರಂತರ ಶ್ರಮಿಸುತ್ತಾ ಬಂದವರು. ಉತ್ತಮ ವಾಗ್ಮಿಗಳೂ ಆದ ಅವರು ಅನೇಕ ಶೈಕ್ಷಣಿಕ ಮತ್ತು ಸಾರ್ವಜನಿಕ ಸಭೆ-ಸಮಾರಂಭ-ಸಮ್ಮೇಳನ-ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಮೌಲಿಕ ಉಪನ್ಯಾಸ ನೀಡಿ ಜನಪ್ರಿಯರೆನಿಸಿಕೊಂಡವರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 