ರಸ್ತೆಗುರುಳಿದ ಎಲ್ಪಿಜಿ ಇಂಧನ ಹೊತ್ತ ಭಾರಿವಾಹನ : ತಪ್ಪಿದ ಭಾರೀ ದುರಂತ, ನಿಟ್ಟುಸಿರುಬಿಟ್ಟ ಪೊಲೀಸರು

ರಸ್ತೆಗುರುಳಿದ ಎಲ್ಪಿಜಿ ಇಂಧನ ಹೊತ್ತ ಭಾರಿವಾಹನ : ತಪ್ಪಿದ ಭಾರೀ ದುರಂತ, ನಿಟ್ಟುಸಿರುಬಿಟ್ಟ ಪೊಲೀಸರು LPG fueled heavy vehicle rolled down the road: A big tragedy missed, police sighed

ರಾಣೆಬೆನ್ನೂರು 14: ಎಲ್ಪಿಜಿ ಗ್ಯಾಸ್  ಇಂಧನ ಹೊತ್ತ ಭಾರೀ ಗಾತ್ರದ ಟ್ಯಾಂಕರ್  ವಾಹನ ರಸ್ತೆ ಗುರುಳಿ ಆತಂಕ ಸೃಷ್ಟಿ.l ಯಾಗಿತ್ತು. ಘಟನೆಯಲ್ಲಿ  ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸದೆ ಕ್ರೇನ್ಗಳು ಬಳಸಿ ಟ್ಯಾಂಕರ್ ವಾಹನ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕ ದಳ  ಮತ್ತು ಪೊಲೀಸರ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .ಗುರುವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ  ನಗರ ಸಮೀಪದ ಮಾಗೋಡು ಬಳಿಯ ಹಳೆ ಅಂತರವಳ್ಳಿ   ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು ಘಟನೆಗೆ 30 ಟನ್ ಭಾರದ ಈ ಎಲ್ಪಿಜಿ  ಟ್ಯಾಂಕರನ ಹಿಂದೆ ಮತ್ತು ಮುಂದಿನ ಟೈಯರ್ ಸ್ಫೂಟಗೊಂಡಿದ್ದೆ ನೆಲಕ್ಕೂರಳಲು ಮುಖ್ಯ ಕಾರಣವೆಂದು ಪ್ರತ್ಯಕ್ಷ ದರ್ಶಿಗಳು  ಹೇಳಿದ್ದಾರೆ.

ಭಾರ ಹೊತ್ತ ಟ್ಯಾಂಕರ್ ವಾಹನದ ಚಾಲಕ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ  ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಭಾರೀ ಗಾತ್ರದ ಮೂರು ಕ್ರೆನ್ ಗಳನ್ನು ತರಿಸಿ, ಅವುಗಳ ಮೂಲಕ ಅತೀ ಭಾರದ ಇಂಧನ ಹೊತ್ತ ಟ್ಯಾಂಕರ್ ಮೇಲಕ್ಕೆ ಎತ್ತುವಲ್ಲಿ ಪರಿಪೂರ್ಣ  ಯಶಸ್ವಿಯಾಗಿದ್ದಾರೆ. ಘಟನೆಯಿಂದಾಗಿ ವಾಹನ ಸವಾರರು ರಸ್ತೆ ಆತಂಕಕ್ಕೀಡಾಗಿದ್ದರು.

ಇದೇ ಮಾದರಿಯಲ್ಲಿ ಇತ್ತೀಚಿಗಷ್ಟೇ ರಾಷ್ಟ್ರೀಯ ಹೆದ್ದಾರಿಯಲ್ಲಿ  ಇಂಧನ ಹೊತ್ತ ಟ್ಯಾಂಕರ್ ನೆಲಕ್ಕೆ ಊರುಳಿ ಭಾರಿ ಆತಂಕ ಸೃಷ್ಟಿಯಾಗಿದ್ದನು ಮಾಸುವ ಮುನ್ನವೇ ಇಂತಹ  ಮತ್ತೊಂದು ಘಟನೆ ನಡೆದಿದ್ದು ಜನರಲ್ಲಿ ಆತಂಕವನ್ನುಂಟು ಮಾಡಿದೆ. 30 ಟನ್ ಬಾರದ ಈ ಕ್ಯಾಂಟರ್ ನೆಲಕ್ಕೂರಳಿದಾಗ, ಆಕಸ್ಮಿಕ ಸೋರಿಗೆ ಏನಾದರೂ ಆಗಿದ್ದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಅನಾಹುತ ದುರಂತ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ನಿರಂತರ ಪ್ರಯತ್ನದಿಂದ ಟ್ಯಾಂಕರ್ ಎತ್ತುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.