ಹೂವಿನ ಹಡಗಲಿ

ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆಗೆ ಸಿದ್ಧತೆ

ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆಗೆ ಸಿದ್ಧತೆ

ಲೋಕದರ್ಶನ ವರದಿ 

ಹೂವಿನ ಹಡಗಲಿ 01: ತಾಲೂಕಿನ ನಾಗತಿಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಮಕ್ಕಳಿಗೆ ಹೆಚ್ಚಿನ ಅಂಕಗಳಿಸಲು ಉಪಯುಕ್ತ ಮಾಹಿತಿ, ಪಶ್ನೆಪತ್ರಿಕೆಯಲ್ಲಿ ಲೆಕ್ಕಗಳನ್ನು ಬಿಡುವ ಬಗ್ಗೆ ಮಾಹಿತಿಯನ್ನು ಕೊಡಲಾಯಿತು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಹಳ್ಳಿಗುಡಿ ಮಾತನಾಡಿ ಸೋಮವಾರ ನಡೆಯಲಿರುವ ಗಣಿತ ವಿಷಯ ಬಗ್ಗೆ ಮಾಹಿತಿ ನೀಡಿದರು.ಮುಖ್ಯಗುರು ಸುರೇಶ ಅಂಗಡಿ ಮಾತನಾಡಿ ಪ್ರಶ್ನೆ ಪತ್ರಿಕೆಯಲ್ಲಿ 38 ಪ್ರಶ್ನೆಗಳನ್ನು ವಿವರಿಸಿ,ಸುಲಭ ಅಂಕಗಳಿಸುವ ಬಗ್ಗೆ ವಿವರಿಸಿದರು.ಗಣಿತ ಶಿಕ್ಷಕ ಕೋರಿ ವಿಶ್ವನಾಥ ಪ್ರಮೇಯ ಗ್ರಾಫ್ ಸ್ಪರ್ಶಕ ಓಜೀವ ಬಿಡಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಮುಖ್ಯ ಶಿಕ್ಷಕಿ ಮುಬೀನಾ,ನೋಡಲ್ ಅಧಿಕಾರಿ ಮಲ್ಲಿಕಾರ್ಜುನ,ಶಿಕ್ಷಕಿ ಎಂ.ಪಿ.ಎಂ.ಸುನೀತಾ ಇದ್ದರು. 


ಸುದ್ದಿ ಓದಿ