ಬಿಎಸ್‌ಓ ಹಾಗೂ ಬಿಎಲ್‌ಎ ಅವರಿಗೆ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಪೂರ್ವಭಾವಿ ಸಭೆ
Preparatory meeting for BSO and BLA on special intensive revision of voter list
ಲೋಕದರ್ಶನ ವರದಿ
ಜಮಖಂಡಿ 05 : ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಇರಬೇಕು, ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಿ, ಹೊಸ ಮತದಾರರ ಪಟ್ಟಿಯನ್ನು ತಯಾರಿಸುವದು ಎಸ್‌ಐಆರ್ ಮೂಲ ಉದ್ದೇಶವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಹೇಳಿದರು.
ನಗರದ ಬಿಎಲ್ ಡಿಇ ದರ್ಬಾರ್ ಹಾಲ್‌ನಲ್ಲಿ ನಡೆದ ಬಿಎಸ್‌ಓ ಹಾಗೂ ಬಿಎಲ್‌ಎ ಅವರಿಗೆ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿದ ಅವರು, ಯಾವುದೇ ತೊಂದರೆಗಳಾದರೆ ಅಧಿಕಾರಿಗಳನ್ನು ಕೇಳಿ ಪಡೆಯಬೇಕು, ಮತದಾರ ಪಟ್ಟಿಯಲ್ಲಿ ಹಲವಾರು ದಾಖಲೆಗಳನ್ನು ನೀಡುವ ಅವಕಾಶ ಇದೆ, ಆದರೂ ತೊಂದರೆಗಳಾದರೆ ತಹಶೀಲ್ದಾರ, ಎಸಿ, ಡಿಸಿ ಹಾಗೂ ಬೆಂಗಳೂರ ಸಿಎಸ್ ಕಚೇರಿಯವರೆಗೂ ಅಫೀಲು ಹೋಗುವ ಅವಕಾಶವಿದೆ ಯಾರು ಗೊಂದಲಕ್ಕೆ ಒಳಗಾಗಿ ಭಯ ಪಡಬಾರದು ಎಂದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಎಸ್‌ಐಆರ್ ಮಾಡಲು ಬಿಎಲ್‌ಒಗಳನ್ನು ನೇಮಕ ಮಾಡಲಾಗುವದು, ಅಧಿಕಾರಿಗಳ ಜೊತೆಗೆ ಸ್ಥಳೀಯ ಮುಖಂಡರು ಕೈಜೊಡಿಸಬೇಕು, ಯಾವುದೇ ತೊಂದರೆಗಳಾಗದಂತೆ ಗ್ರಾಮ ಪಂಚಾಯತ ಮಟ್ಟದಲ್ಲಿ, ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವದು ಎಂದರು.
ಮತದಾರರು ಯಾವುದೇ ಉಹಾಪೋಹಗಳಿಗೆ ಕಿವಿಗೊಡಬಾರದು, ಮೊದಲು ಎಸ್‌ಐಆರ್ ಬಗ್ಗೆ ತಿಳಿದುಕೊಳ್ಳಬೇಕು, ಮತದಾರರ ಪಟ್ಟಿಯಲ್ಲಿ ನಿಧನ ಹೊಂದಿದವರು ಹಾಗೂ ಎರಡು ಕಡೆಗಳಲ್ಲಿ ಮತದಾನ ಹೊಂದಿದ್ದರೆ ಅವರು ಸ್ವಯಂ ಪ್ರೇರಣೆಯಿಂದ ಒಂದು ಕಡೆಗೆ ವರ್ಗಾವಣೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವದು, ಗ್ರಾಮೀಣ ಭಾಗದಲ್ಲಿ ಯಾವುದೇ ತೊಂದರೆಗಳು ಆಗುವದಿಲ್ಲ, ನಗರದಲ್ಲಿ ಸ್ವಲ್ಪ ಗೊಂದಲಗಳಾಗಬಹುದು ಆದ್ದರಿಂದ ಸ್ಥಳಿಯರು ಸಹಕರಿಸಿ ಎಂದರು.
ತಹಶೀಲ್ದಾರ ಅನೀಲ ಬಡಿಗೇರ ಮಾತನಾಡಿ, ಮತದಾರರ ಪಟ್ಟಿ ಸರಳವಾಗಿದ್ದರೆ ಚುಣಾವಣೆ ಪ್ರಕ್ರಿಯೇ ಸರಳವಾಗಿ ನಡೆಯುತ್ತದೆ ಆದ್ದರಿಂದ 2002ರ ನಂತರ 2026ರಲ್ಲಿ ಎಸ್‌ಐಆರ್ ನಡೆಯುತ್ತಿದೆ ಅಧಿಕಾರಿಗಳು ಮನೆಗೆ ಬಂದು ಎರಡು ಪಾರ್ಮ್ ನೀಡುತ್ತಾರೆ ಅದರಲ್ಲಿ ಒಂದು ತುಂಬಿ ನಮಗೆ ನೀಡಬೇಕು ಎಂದರು. ನಗರಸಭೆ ಪೌರಾಯುಕ್ತ ಜ್ಯೋತಿಗೀರೀಶ ಎಸ್, ಬಿಇಓ ಅಶೋಕ ಬಸಣ್ಣವರ, ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆನಂದ ಪಿ, ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 