ಜೂನ್ 03ರಂದು ಕುರುಬರ ಸಹಕಾರ ಪತ್ತಿನ ಶತಮಾನೋತ್ಸವ ಆಚರಣೆ ಸಿದ್ದತೆ
Preparations for the centenary celebration of shepherds cooperative on June 03
ಗದಗ 01: ದಿ.ಕರ್ನಾಟಕ ಕುರುಬರ ಸಂಘದ ಅಡಿಯಲ್ಲಿ ಶತಮಾನೋತ್ಸವ ಸಮಾರಂಭ ಆಚರಿಸುತ್ತಿದ್ದು, ಒಂದು ಹೆಮ್ಮೆಯ ವಿಷಯ. ನಮ್ಮ ಶ್ರೀಮಂತ ಹಾಲುಮತದ ಪರಂಪರೆಯನ್ನು ಆಚರಿಸಲು, ಹಾಗೂ ನಮ್ಮ ಸಮುದಾಯದ ಬಂಧಗಳನ್ನು ಬಲಪಡಿಸಲು ಈ ಶತಮಾನೋತ್ಸವದ ಸಂಭ್ರಮ ಆಚರಣೆ.
ಈ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸುವರು. ನೆನಪಿನ ಕಾಣಿಕೆ ಬಿಡುಗಡೆಯನ್ನ ಕಾನೂನು ಶಾಸನ ರಚನೆ ಸಂಸದೀಯ ವ್ಯವಹಾರ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಕೆ ಪಾಟೀಲ ಹಾಗೂ ಶತಮಾನೋತ್ಸವ ಲಾಂಛನ ಬಿಡುಗಡೆಯನ್ನ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ,ಕೈಪಿಡಿ ಬಿಡುಗಡೆಯನ್ನ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಾಸಪ್ಪ ಕು ಕುರುಡಗಿ ವಹಿಸುವುದಾಗಿ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘ ನಿಯಮಿತ, ಗದಗನ ಅಧ್ಯಕ್ಷರಾದ ವಾಸಪ್ಪ ಕುರುಡಗಿ ತಿಳಿಸಿದರು.
ಶತಮಾನೋತ್ಸವ ಕಾರ್ಯಕ್ರಮವು ಜೂನ 03 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ವಿವೇಕಾನಂದ ಸಭಾಂಗಣ ಎಪಿಎಂಸಿ ಯಾರ್ಡ ಗದಗ ನಲ್ಲಿ ನೆರವೇರುವುದು. ಕುರುಬ ಸಮಾಜದ ಮುಖಂಡರಿಂದ ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬಲವರ್ಧನೆಗಾಗಿ ಈ ಸಂಸ್ಥೆಯ ಧೈಯೋದ್ದೇಶಗಳನ್ನಿಟ್ಟುಕೊಂಡು ಪ್ರಾರಂಭಿಸಲಾಯಿತು. ಶತಮಾನದ ಇತಿಹಾಸವುಳ್ಳ ಈ ಸಂಘವು ಹಲವಾರು ಸಾಮಾಜಿಕ ಮುಖಂಡರ ನೇತೃತ್ವದಲ್ಲಿ ಸಮಾಜದ ಉನ್ನತಿಗಾಗಿ ಉತ್ತರ ಕರ್ನಾಟಕದ ಜನತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಹಾಯ ಮಾಡುತ್ತ ಬಂದಿದ್ದು, ಎಲ್ಲ ಸಮುದಾಯದ ಜನಾಂಗಕ್ಕೂ ಸಾಲ ನೀಡುತ್ತಾ ಬಂದಿದ್ದು, ಬ್ಯಾಂಕ್ ಹಾಗೂ ಶಾಲೆ ಸಾರ್ವಜನಿಕರ ಉಪಯೋಗಕ್ಕೆ ಇವೆ. ಸಾಮಾಜಿಕವಾಗಿ ದೂರದೃಷ್ಟಿ ಇಟ್ಟು ಇವುಗಳನ್ನ ನಡೆಸಿಕೊಂಡು ಬರುತ್ತಿರುವುದಾಗಿ ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು,ರೋಣ ಶಾಸಕರಾದ ಜಿ ಎಸ್ ಪಾಟೀಲ, ಬಾಗಲಕೋಟೆ ಶಾಸಕ ಎಚ್ ವಾಯ್ ಮೇಟಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ, ನರಗುಂದ ಶಾಸಕ ಸಿ ಸಿ ಪಾಟೀಲ, ಕೊಪ್ಪಳ ಶಾಸಕ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ ಸದಸ್ಯ ಡಾ.ಯತೀಂದ್ರ ಸಿದ್ಧರಾಮಯ್ಯ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ರಾಜ್ಯದ ಅನೇಕ ನಾಯಕರು ಮುಖಂಡರು, ದುರೀಣರು ಸೇರಿ ಸುಮಾರು 6-7 ಸಾವಿರ ಜನ ಭಾಗಿಯಾಗುವುದಾಗಿ ತಿಳಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 