ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನ Prank show to create awareness among the public

ಲೋಕದರ್ಶನ ವರದಿ 

ವಿಜಯಪುರ, ಮೇ.15: ಬಿ.ಎಲ್‌.ಡಿ.ಇ ಆಸ್ಪತ್ರೆ ಆವರಣದಲ್ಲಿ ಅಗ್ನಿ ಶಾಮಕ ಇಲಾಖೆ, ಗೃಹ ರಕ್ಷದ ದಳ, ಬಿ.ಎಲ್‌.ಡಿ.ಇ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡ ಮತ್ತು ಎನ್‌.ಎನ್‌.ಸಿ ಘಟಕಗಳಿಂದ (ಏರ್ ರೈಡ್) ಬಾಂಬ್ ಬ್ಲಾಸ್ಟ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ಅಣುಕು ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ಬಾಂಬ್ ಬ್ಲಾಸ್ಟ್‌ ಆದ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಉಪಚಾರಗಳ ಕುರಿತು ಅಣುಕು ಪ್ರದರ್ಶನ ಮುಖಾಂತರ ಒಳಗೆ ಸಿಲುಕೊಂಡಿರುವ ಸಾರ್ವಜನಿಕರನ್ನು ತುರ್ತಾಗಿ ರಕ್ಷಿಸಲು ಕ್ರಮ ವಹಿಸುವುದು ಜೊತೆಗೆ ಕಪ್ಪು ಬಣ್ಣದ ಗುರುತು ಮರಣ ಹೊಂದಿದವರೆಂದು ಗುರುತಿಸಲಾಗುವುದು.

ಕೆಂಪು   ತೀವ್ರತರವಾಗಿ ಗಾಯಗೊಂಡಿವರೆಂದು, ಹಳದಿ ಬಣ್ಣ ಕಡಿಮೆ ಗಾಯಗೊಂಡವರೆಂದು ಹಾಗೂ ಹಸಿರು  ಬಣ್ಣ ಅಪಾಯದಿಂದ ಪಾರಾದವರೆಂದು ಪರಿಗಣಿಸುವಂತೆ ಇಲ್ಲಿ ನಡೆದ ಅಣುಕು ಪ್ರದರ್ಶನ ಯಶಸ್ವಿಯಾಗಿ ನಡೆಸಿಕೊಡಲಾಯಿತು. ಅದರೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಘಟನೆ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಇಲಾಖೆ ಅಧಿಕಾರಿಗಳು, ಬಿ.ಎಲ್‌.ಡಿ.ಇ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಅಣುಕು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು. 

ಈ ಅಣುಕು ಪ್ರದರ್ಶನದಲ್ಲಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳಾದ ಶಶಿಧರ ನೀಲಗರ್,ಅಗ್ನಿ ಶಾಮಕ ಠಾಣಾಧಿಕಾರಿ ಉಮೇಶ ತಳಕೇರಿ, ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಅಶೋಕ ಜಡ್ಡೆನ್ನವರ, ಅಶೋಕ ರಾಠೋಡ, ಗೃಹ ರಕ್ಷದ ಕಮಾಡೆಂಟ್ ಶಿವಾನಂದ ಶಿವೂರ, ಡೆಪ್ಯೂಟಿ ಕಮಾಡೆಂಟ್ ಮಹಾದೇವ ಪೂಜಾರ,  ಬಿ.ಎಲ್‌.ಡಿ.ಇ ಡೀಮ್ಡ್‌ ಯುನಿವರ್ಸಿಟಿಯ ಡೀನ್ ಮತ್ತು ಪ್ರಾಚಾರ್ಯರಾದ ಡಾ. ತೇಜಸ್ವಿನಿ ವಲ್ಲಭ, ಉಪ ಪ್ರಾಚಾರ್ಯರಾದ ಡಾ.ವಿಜಯಕುಮಾರ ಟಿ.ಕೆ, ಡಾ. ಆನಂದ ಅಂಬಲಿ, ಡಾ.ಎನ್‌.ಎಸ್ ಬೆಂತೂರ, ಡಾ. ರವಿಕುಮಾರ ಬಿರಾದಾರ,ಡಾ. ಐ.ಎಸ್‌. ಧಾರವಾಡಕರ, ಡಾ.ಎಸ್‌.ಎಸ್ ಕಟ್ಟಿ, ಡಾ. ವಿನೋದ ಜಾಧವ, ಶಾಂತೇಶ ಸಲಗರೆ, ಶಶಿಕಲಾ ತೇರದಾಳ, ಮಂಗಲಾ ಕೋಳಿ, ಜಯಂತಿ ಆರ್, ಚೇತನ ಜೋರಾಪುರ, ಸುಧಾರಕರ ಸಮಗೊಂಡ, ಪ್ರಕಾಶ ಜಕ್ಕೊಂಡಿ, ಅಶ್ವತಾ ಕೆ, ಮಲ್ಲಿಕಾರ್ಜುನ ಮೇತ್ರಿ, ವಿಶ್ವನಾಥ ಬಿರಾದಾರ, ಆನಂದ ಪಾಟೀಲ, ಏಕನಾಥ ಜಾಧವ, ರಾಕೇಶ ಜೈನಾಪುರ, ಅಗ್ನಿ ಶಾಮಕ , ಗೃಹ ರಕ್ಷಕ, ಬಿ.ಎಲ್‌.ಡಿ.ಇ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡ ಸಿಬ್ಬಂದಿಗಳು ಮತ್ತು ಎನ್‌.ಎನ್‌.ಸಿ ಘಟಕದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.