ನಾಟಕಗಳು ಗ್ರಾಮೀಣ ಜನರ ಸಂಸ್ಕೃತಿಯ ಪ್ರತೀಕ
ರಾಣೇಬೆನ್ನೂರು18: ಇತಿಹಾಸದಲ್ಲಿ ನಮ್ಮ ಕಲಾ ಪರಂಪರೆಗೆ ಬಹುದೊಡ್ಡ ಗೌರವ ಮಾನ, ಮನ್ನಣೆ ಇತ್ತು ಆಧುನಿಕ ಬದುಕಿನಲ್ಲಿ ನೈಜ ಸಂಸ್ಕೃತಿಯ ಕಲೆ ನಶಿಸಿ ಹೊಗುತ್ತಲಿದೆ. ನಾಟಕಗಳು ಮತ್ತು ಕಲಾವಿದರು ಉಳಿದು ಬೆಳೆಯಬೇಕಾದರೆ, ಜನಾಶ್ರಯದ ಅಗತ್ಯವಿದೆ ಎಂದು ಪ್ರಗತಿಪರ ರೈತ ವಿಷ್ಣಪ್ಪ ಕಂಬಳಿ ಹೇಳಿದರು.
ಅವರು ತಾಲೂಕಿನ ಹಳೆಹೊನ್ನತ್ತಿ ಗ್ರಾಮದಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ಕಮಿಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಕಲಾವಿದೆ ಯಶೋಧಾ ಗುಡಗುಡಿ ತಂಡದವರು ಪ್ರದಶಿಸಿದ ಸಿಡಿದೆದ್ದ ಸೂರ್ಯ ಚಂದ್ರ ನಾಟಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಗದಲ್ಲಿ ನಿತ್ಯ ನಿರಂತರ ನಾಟಕಗಳು ಜೀವಂತವಾಗಿದ್ದವು. ಅದಕ್ಕೆ ಅಂದಿನ ಜನರು ಅತ್ಯಂತ ಪ್ರೀತಿ-ವಿಶ್ವಾಸದಿಂದ ಗೌರವ ನೀಡುವುದರ ಜೊತೆಗೆ ಸ್ವತ: ಹಣವನ್ನು ಹಾಕಿಕೊಂಡು ನಾಟಕ ಪ್ರದರ್ಶನ ಮಾಡುವ ಪರಂಪರೆ ಇಲ್ಲಿತ್ತು. ಬದಲಾದ ವಾತಾವರಣದಲ್ಲಿ ನಿಜವಾದ ಕಲೆಗಳು ಮಾಯವಾಗುತ್ತಿವೆ. ಯಶೋದಾ ಗುಡಗುಡಿ ತಂಡದವರು ಇಂತಹ ನಾಟಕ ಕಲೆಯನ್ನು ಪ್ರದಶರ್ಿಸುತ್ತಿರುವುದು ಜೀವಂತಿಕೆಯ ಲಕ್ಷಣವಾಗಿದೆ.
ಮಂಜಪ್ಪ ಬಿ. ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಮಲಕಪ್ಪ ಬೆನ್ನೂರು, ಹಾಲಪ್ಪ ಮಾಗನೂರ, ಚಿತ್ರಶೇಖರ ತಿಮ್ಮೇನಹಳ್ಳಿ, ಮಂಜು ಎಸ್.ಧೂಳಪ್ಪನವರ, ದುರ್ಗಪ್ಪ ಸೋ ನಿಟ್ಟೂರು, ನಾಗಪ್ಪ ಭಜಂತ್ರಿ ಸೇರಿದಂತೆ ತಂಡದ ಕಲಾವಿದರು, ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 