ಜಾಕ್ವೆಲ್ ಬಳಿ ಪೈಪ್ಲೈನ್ ಸೋರಿಕೆ; ಕೃಷಿ ಜಮೀನುಗಳಿಗೆ ನೀರು ನುಗ್ಗಿತು
ಹೂವಿನಹಡಗಲಿ 12: ಇಲ್ಲಿನ ತುಂಗಭದ್ರಾ ನದಿ ತೀರದ ರಾಜವಾಳ ಸಮೀಪ, ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ವೆಲ್ ಬಳಿ ಶನಿವಾರ ಪೈಪ್ಲೈನ್ ಸೋರಿಕೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ.
ಕೂಡ್ಲಿಗಿ ತಾಲ್ಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್ಲೈನ್ ಒಡೆದು ಸೋರಿಕೆ ಉಂಟಾದ ಪರಿಣಾಮ ಅಪಾರ ಪ್ರಮಾಣದ ನೀರು ರೈತರ ಕೃಷಿ ಜಮೀನುಗಳಿಗೆ ಹರಿದಿದೆ. ಇದರಿಂದ ಭತ್ತ ಸೇರಿದಂತೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಂಗಟಾಲೂರು ಎತ್ತಿನೀರಾವರಿ ಯೋಜನೆ ವಿಭಾಗದ ಎಇಇ ರಾಘವೇಂದ್ರ, ಸೋರಿಕೆ ಉಂಟಾಗಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.