ಅಗಸ್ಟ್‌ 01 ರಂದು ಜಂಗಮದ ಬದುಕು ನಾಟಕ ಪ್ರದರ್ಶನ

ಅಗಸ್ಟ್‌ 01 ರಂದು ಜಂಗಮದ ಬದುಕು ನಾಟಕ ಪ್ರದರ್ಶನ Performance of the play 'Jangamada Baduku' on August 1st

ಲೋಕದರ್ಶನ ವರದಿ 

 ಧಾರವಾಡ 29 : ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಅಗಸ್ಟ್‌ 01 ರಂದು ಸಂಜೆ 6.30ಕ್ಕೆ ರಂಗಾಯಣದಿಂದ ಪ್ರಸನ್ನ ರಚಿಸಿ, ಯತೀಶ್ ಕೊಳ್ಳೇಗಾಲ ನಿರ್ದೇಶಿಸಿ, ಜಂಗಮರಾಟ ಪ್ರಸ್ತುತಿಯ “ಜಂಗಮದ ಬದುಕು” ನಾಟಕವನ್ನು ಏರಿ​‍್ಡಸಿದೆ. ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕರಾದ ಝಕೀರ ನದಾಫ ಅವರು ಉಪಸ್ಥಿತರಿರುವರು. ಪ್ರವೇಶ ದರ ರೂ.100/-ನ್ನು ನಿಗದಿಪಡಿಸಲಾಗಿದೆ. ಸಾಹಿತ್ಯಾಸಕ್ತರು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.