ಜನರ ಪ್ರೀತಿ ವಿಶ್ವಾಸವೇ ಶ್ರೀ ರಕ್ಷೆ : ಕುಶರಾಜ್ ಪರಣ್ಣವರ
People's love and trust is the protection of Sri Raksha: Kushraj Parannavara
ಲೋಕದರ್ಶನ ವರದಿ
ವಿಜಯಪುರ 03 : ದೇವರ ಮೇಲಿನ ನಂಬಿಕೆ, ಟಿಟಿನಿಸ್ವಾರ್ಥ ಸಮಾಜಸೇವೆ, ಜನರ ಪ್ರೀತಿ ವಿಶ್ವಾಸವೇ ರಕ್ಷೆ ಎಂದು ಹಿರಿಯ ನಾಯಕ, ಗಣ್ಯ ಉದ್ದಿಮೆದಾರ ಕುಶರಾಜ್ ಪರಣ್ಣವರ ನುಡಿದರು. ನಗರದ ಸುಂದರೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ದಿನಾಂಕ 01-06-2026 ರಂದು ಸದ್ಭಕ್ತರ ಭಜನಾ ಮಂಡಳಿಯವರು ಏರಿ್ಡಸಿದ್ದ ಅವರ 58 ನೆಯ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಾನವನ ಜೀವನದಲ್ಲಿ ಕಷ್ಟ ಕಾರ್ಪಣಯಗಳು ಹಲವಾರು ಬಂದರು. ಅವುಗಳ ನಿವಾರಣೆಗೆ ಗುರುಗಳ ಮಾರ್ಗದರ್ಶನ, ದೇವರ ಆಶೀರ್ವಾದ ಅತ್ಯವಶ್ಯಕ, ಭಕ್ತಿ, ಜ್ಞಾನ, ಭಜನೆ, ಸಂಕೀರ್ತನೆದಿಂದ, ಮನಸ್ಸು ಶಾಂತವಾಗಿ ಸಾಧನೆಗೆ ದಾರಿಯಾಗುತ್ತದೆ, ಕಾರಣ ಪ್ರತಿಯೊಬ್ಬರು, ಭಗವಂತನ ಚಿಂತನ, ಸ್ಮರಣ, ಸತ್ಸಂಗದಲ್ಲಿರಬೇಕು ಎಂದರು. ಹಾಗೂ ದಕ್ಷಿಣ ಕಾಶಿ ಪವಿತ್ರ ಸುಂದರೇಶ್ವರರ ಸನ್ನಿಧಿಯಲ್ಲಿ ಆತ್ಮೀಯರು ತಮ್ಮ ಹುಟ್ಟು ಹಬ್ಬ ಆಚರಿಸಿ ಹಾರೈಸಿದ್ದು ಹೆಚ್ಚು ಸಂತಸ ತಂದಿದ್ದು, ಜವಾಬ್ದಾರಿಯನ್ನು ಹೆಚ್ಚಿಸಿದೆ, ಹೆಚ್ಚಿನ ಸಮಾಜ ಸೇವೆಗೆ ಪ್ರೇರಣೆ ನೀಡಿದೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು,
ನ್ಯಾಯವಾದಿ ದಾನೇಶ ಅವಟಿ ಅವರು ಮಾತನಾಡಿ, ಹಿರಿಯರು, ಕಿರಿಯರು ಎಂದು ಬೇದಭಾವ ಮಾಡದೇ ಎಲ್ಲರೊಂದಿಗೆ ಬೆರೆತು, ಜನರ ನೋವು- ನಲಿವಿಗೆ ಸ್ಪಂದಿಸುತ್ತಾ ಕುಶಿರಾಜ್ ಅಣ್ಣಾ ಅವರು ಇದ್ದಲ್ಲೇಲ್ಲಾ ಖುಷಿ, ಸಂತಸದ ವಾತಾವರಣ ತುಂಬುವುದರಲ್ಲಿ ನಿರತರಾಗಿದ್ದಾರೆ. ಜನರ ನಾಡಿ ಮಿಡಿತವನ್ನು ಅರಿತು ಅವರು ಬಡವರು, ನೊಂದವರು, ದುಃಖಿತರಿಗೆ ತುಂಬುವ ಮಾನಸಿಕ ಧೈರ್ಯ, ಸಹಾಯ ಸಾಂತ್ವನ ಅನನ್ಯವಾದುದು. ಅವರ ಭಾವಿ ಜೀವನ ಉಜ್ವಲವಾಗಿ ದೇವರು ಅವರ ಕುಟುಂಬ ವರ್ಗದವರನ್ನು ಚನ್ನಾಗಿ ಇಟ್ಟಿರಲಿ, ಅವರಿಂದ ಇನ್ನೂ ಹೆಚ್ಚು ಉತ್ತಮ ಕಾರ್ಯಗಳು ಆಗಲಿ ಎಂದು ಹಾರೈಸಿದರು.
ಸನಾತನ ಹಿಂದೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಸುರೇಶಗೌಡ ಕ ಪಾಟೀಲ ಅವರು ಮಾತನಾಡಿ, ಕುಶರಾಜ್ ಗೌಡರ ಅಂಥ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅಪರೂಪ. ಅವರ ಕೊಡುಗೆ ಅಪಾರ ಅಂಥವರು ಬಾಳಿದ ಬದುಕೇ ಇತರರಿಗೆ ಮಾದರಿ ಅವರಿಗೆ ದೇವರು ಆಯುರ್ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾರಿಸ್ ಶಿರಹಟ್ಟಿ, ಹನಮಂತ ಕಲಾದಗಿ, ಶ್ರೀಮಂತ ಆಣೆಪ್ಪನವರ, ಈರಣ್ಣ ಪಾಟೀಲ, ಈಶ್ವರ ಸಾಲಿ, ರಾಘವೇಂದ್ರ ತೂನಸ್ಯಾಳ, ವೀರೇಂದ್ರ ಪಾಟೀಲ, ಶಿವಶಂಕರ ಮಠ, ರಾಕೇಶ್ ಕುರಿಯವರ, ಅಕ್ಷಯ ಇಜೇರಿ, ಚನ್ನಬಸಪ್ಪ ಸಾವಕಾರ, ಈಶ್ವರ ಸಾಲಿ, ಜಗು ಟಿ ಈ, ಪ್ರಕಾಶ್ ರೆಡ್ಡಿ, ಪ್ರಕಾಶ್ ಮಂಕಣಿ, ರಮೇಶ ಬಗಲಿ, ರವಿ ಬಸವಪ್ರಭು, ಶಿವಪುತ್ರ, ಸುರೇಶ್ ಗುರುಮಠ, ಸಿದ್ದಪ್ಪ ಅಂಗಡಿ ಸ್ವಾಗತಿಸಿದರು. ಶಿಕ್ಷಕ ಶ್ರೀಮಂತ ಕರಣಿ ನಿರೂಪಿಸಿದರು. ಪ್ರೇಮಾ ಬಾಗೇವಾಡಿ ವಂದಿಸಿದರು. ಕಾರ್ಯಕ್ರಮದ ಕೊನೆಗೆ ಸುಂದೇಶ್ವರ ಲಿಂಗಕ್ಕೆ ಪೂಜೆ ಮಹಾ ಮಂಗಳಾರತಿ ಸಲ್ಲಿಸಿ, ತೀರ್ಥ ಪ್ರಸಾದ ವಿತರಿಸಲಾಯಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 