ಹೂವಿನ ಹಡಗಲಿ

ಮಾಸ್ಕ್ ಧರಿಸದ ಜನರಿಗೆ ದಂಡ

ಮಾಸ್ಕ್ ಧರಿಸದ ಜನರಿಗೆ ದಂಡ

ಹೂವಿನಹಡಗಲಿ :21-ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ಪಟ್ಟಣದಲ್ಲಿ ಸೋಮವಾರ ಪುರಸಭೆ ಮತ್ತು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದೆ.

ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಸಿಪಿಯ ರಾಮಲಿಂಗರೆಡ್ಡಿ ಮತ್ತು ಪೊಲೀಸ್ ಸಿಬ್ಬಂದಿ ಶಾಸ್ತ್ರೀ ವೃತ್ತದಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ವ್ಯಕ್ತಿಗಳನ್ನ ತಡೆದು ದಂಡ ಹಾಕಿ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡರು.  ಕೋವಿಡ್ ವ್ಯಾಪಾಕವಾಗಿ ಹರಡುತ್ತಿದ್ದರೂ ಅನೇಕ ಜನ ಮಾಸ್ಕ್ ಧರಿಸುತ್ತಿಲ್ಲ .ಅರಿವು ಮೂಡಿಸುವುದರ ಜತೆಗೆ ನಿಯಮ ಮೀರುವವರ ಮೇಲೆ ದಂಡ ಹಾಕಲಾಗುತ್ತಿದೆ.

ವ್ಯಾಪಾರಿಗಳು ಅಂತರ ಕಾಯ್ದು ಕೊಂಡು ತರಕಾರಿ, ಹಣ್ಣು ಮಾರಾಟ ಮಾಡಬೇಕು. ಆನ ಒಂದೆಡೆ ಗುಂಪು ಗುಂಪಾಗಿ ಸೇರಿದಂತೆ ನೋಡಿಕೊಳ್ಳಬೇಕು. ಸ್ವಚ್ಚತೆ ಕಾಯ್ದುಕೊಂಡು ವ್ಯಾಪಾರಿಗಳು, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಮಾರುಕಟ್ಟೆ ಬಂದರೆ ಅಂತವರೆಗೆ ದಂಡ ಹೇರಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸುದ್ದಿ ಓದಿ