ಪಾಲಕ-ಶಿಕ್ಷಕ-ವಿದ್ಯಾರ್ಥಿ ಸಮಾವೇಶ
Parent-Teacher-Student Conference
ಬೆಳಗಾವಿ 25: ನಗರದ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಆರ್. ಪಿ. ಡಿ. ಮಹಾವಿದ್ಯಾಲಯದಲ್ಲಿ ದಿ. 23ರಂದು ಪಾಲಕ-ಶಿಕ್ಷಕ-ವಿದ್ಯಾರ್ಥಿ ಸಮಾವೇಶ ಜರುಗಿತು.
ಸಮಾರಂಭದಲ್ಲಿ ಅಥಿತಿ ಗಳಾಗಿ ಪಾಲ್ಗೊಂಡಿದ್ದ ಸಂಸ್ಥೆಯ ವೈಸ್ ಚೇರ್ಮನ್ ರಾದ ಡಾ. ಎಸ್. ವೈ. ಪ್ರಭು ಅವರು ವಿದ್ಯಾರ್ಥಿಗಳ ಸತತವಾದ ಅಭ್ಯಾಸದಿಂದಾಗುವ ಲಾಭ, ಪಾಲಕರು ಮಕ್ಕಳ ಬಗ್ಗೆ ವಹಿಸಬೇಕಾದ ಕಾಳಜಿ ಕುರಿತು ಮಾತನಾಡಿದರು.. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಬಿ. ಕೋಲ್ಕಾರ ಮತ್ತು ಮರಾಠಿ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಡಿ. ಗಾವಡೆ ಅವರು ಪಾಲಕ-ಶಿಕ್ಷಕ-ವಿದ್ಯಾರ್ಥಿ ಗಳ ನಡುವಿನ ಸಂಭಂದ, ವಿದ್ಯಾರ್ಥಿಗಳು ಪಠ್ಯ- ಪೂರಕ ಪಠ್ಯ ಹಾಗೂ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಸಮಯಪ್ರಜ್ಞೆಯೊಂದಿಗೆ ಮತ್ತು ಅಧ್ಯಯನದ ಶಿಸ್ತಿನ ಮೂಲಕ ಸಾಧನೆ ಮಾಡುವ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪ್ರಾಚಾರ್ಯರಾದ ಡಾ. ಅಭಯ ಪಾಟೀಲ ಅವರು ವಹಿಸಿದ್ದರು..
ಆರಂಭದಲ್ಲಿ ಐ.ಕ್ಯೂ.ಎ.ಸಿ. ಚೇರಮನ್ನರಾದ ಡಾ. ಪ್ರಸನ್ನ ಜೋಶಿ ಅವರು ಸ್ವಾಗತ ಕೋರಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಆಯಾ ವಿಷಯಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಡಾ. ಎಸ್. ಎಚ್. ಪಾಟೀಲ, ವಾಣಿಜ್ಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ವೈಶಾಲಿ ಹಣಮಗೊಂಡ ಸೇರಿದಂತೆ ಎಲ್ಲಾ ಅಧ್ಯಪಕರು ಮತ್ತು ಬಹು ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಪ್ರೊ. ಸಾಯಿಶೀಲಾ ಜಡೆ ಅವರು ನಿರೂಪಿಸಿ ವಂದನಾರೆ್ಣ ಸಲ್ಲಿಸಿದರು..
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 