400 ವರ್ಷಗಳ ಪುರಾತನ ದೇವಾಲಯಕ್ಕೆ ಪಂಡರಪುರ ದಿಂಡಿ ಆಗಮನ

400 ವರ್ಷಗಳ ಪುರಾತನ ದೇವಾಲಯಕ್ಕೆ ಪಂಡರಪುರ ದಿಂಡಿ ಆಗಮನ Pandharpur Dindi arrives at the 400-year-old temple

ಲೋಕದರ್ಶನ ವರದಿ 

 ಯಮಕಣಮರಡಿ 16 : ಗ್ರಾಮದ ಬೋಯಿಗಲ್ಲಿಯಲ್ಲಿರುವ 400 ವರ್ಷಗಳ ಪುರಾತನ ಕಾಲದ ವಿಠಲ ಮಂದಿರಕ್ಕೆ ದಿನಾಂಕ 16 ರಂದು ಪಾದಯಾತ್ರೆಯ ಮೂಲಕ ಬಂದಿರುವ ಬೆಳಗಾವಿ ಎಳೂರ್ ಗ್ರಾಮದ ಪಾಂಡುರಂಗನ ಭಕ್ತಾದಿಗಳು ವಿಠಲ ಮಂದಿರಕ್ಕೆ ಬೆಟ್ಟಿ ನೀಡಿ ಗ್ರಾಮದ ಸಕಲ ಭಕ್ತಾದಿಗಳ ಮನದಲ್ಲಿ ಭಕ್ತಿ ಬೆಳಕು ಮೂಡಿಸಿದಂತಾಗಿದೆ ಸುಮಾರು ವರ್ಷಗಳಿಂದ ಸದರಿ ದೇವಸ್ಥಾನವು ಪಾಲು ಪಾಳುಬಿದ್ದು ಅ ಆವ್ಯವಸ್ಥೆಗೆ ಒಳಪಟ್ಟಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮದ ಸಕಲ ಭಕ್ತಾದಿಗಳು ಅಪಾರ ದೀನಿಗೆ ಸಲ್ಲಿಸುತ್ತಾ ಸದರಿ ಮಂದಿರವನ್ನು ಅಭಿವೃದ್ಧಿಪಡಿಸುವದಕ್ಕಾಗಿ ಮುಂದಾಗಿದ್ದಾರೆ.

ಸದರಿ ದೇವಾಲಯವು ಸುಮಾರು 400 ವರ್ಷಗಳ ಮುಂಚಿತವೇ ನಿರ್ಮಾಣವಾಗಿತ್ತು ಎಂದು ಕೆಲವರು ಹಿರಿಯರುಮಾತನಾಡುತ್ತಾರೆ. ದೇವಸ್ಥಾನದ ಶಿಲಾಮೂರ್ತಿಯು ಪುರಾತನ ಕಾಲದಿದ್ದು ಕಟ್ಟಡವು ಸಹಿತ ಪುರಾತನ ಸಂಪ್ರದಾಯದಂತೆ ಇರುತ್ತದೆ ಸದರಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವಲ್ಲಿ ಸಕಲ ಭಕ್ತಾದಿಗಳು ಶರ್ಮ ಪಡುತ್ತಿರುವುದು ಹೆಮ್ಮೆಪಡುವ ಸಂಗತಿಯಾಗಿದೆ. ಸದರಿ ದೇವಸ್ಥಾನದಲ್ಲಿ ಸುಮಾರು ವರ್ಷಗಳ ಕಾಲ ಯಾವುದೇ ತರದ ಪೂಜೆ ಪುರಸ್ಕಾರ ಭಜನೆ ಕೀರ್ತನೆ ನಡೆಯುವದು ನಿಂತು ಹೋಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರು ಯುವಕ ಮಿತ್ರರು ಮುಂದಾಗಿ ಭಕ್ತರ ದೇಣಿಗೆಯಿಂದ ಅಭಿವೃದ್ಧಿಪಡಿಸುತ್ತಿರುವುದು ಒಂದು ಹೆಮ್ಮೆಪಡುವ ಸಂಗತಿಯಾಗಿದೆ.

ಬರುವ ಆಶಾಡ ಏಕಾದಶಿ ಪಂಡರಪುರ ವಿಠಲನ ಜಾತ್ರೆ ಅಂಗವಾಗಿ ಗ್ರಾಮದಲ್ಲಿ ಎರಡು ದಿನಗಳ ಕಾಲ ಉಪವಾಸ ಮಹಾಪ್ರಸಾದ ಭಜನೆ ಕೀರ್ತನೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಅಭಿವೃದ್ಧಿ ಸಮಿತಿ ಸರ್ವ ಸದಸ್ಯರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಸದರಿ ದೇವಸ್ಥಾನಕ್ಕೆ ಬಹಳಷ್ಟು ಭಕ್ತಾದಿಗಳು ತನು ಮನ ಧನದಿಂದ ದೇಣಿಗೆಯನ್ನು ಅರ​‍್ಿಸುತ್ತಿರುವುದು ಎಲ್ಲರಲ್ಲಿ ಸಂತಸವನ್ನುಂಟು ಮಾಡಿದೆ.