ಕಷ್ಟ ಎದುರಿಸಿ, ಸಾಧನೆಯ ಹಾದಿಯ ನೇರಬೇಕು

ಕಷ್ಟ ಎದುರಿಸಿ, ಸಾಧನೆಯ ಹಾದಿಯ ನೇರಬೇಕು One must face challenges and tread the path of achievement


ವಿಜಯಪುರದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ 

         ವಿಜಯಪುರ  08:  ಕಷ್ಟಗಳನ್ನು ಎದುರಿಸಿ ಸ್ವಯಂ ಸಾಧನೆಯ ಹಾದಿ ತುಳಿಯಬೇಕು ಎಂದು ಖ್ಯಾತ ಲೇಖಕ ಹಾಗೂ ಇತಿಹಾಸ ತಜ್ಞ ಡಾ. ಕೃಷ್ಣ ಕೊಲ್ಲಾರಕುಲಕರ್ಣಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ನಗರದ ಬಿ.ಎಲ್‌.ಡಿ.ಇ ಆವರಣದಲ್ಲಿರುವ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸೆ.5ರ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಬಾಲ್ಯದಿಂದ ಇಲ್ಲಿಯವರೆಗೆ ತಾವು ಸಾಗಿ ಬಂದ ಸಾಧನಾ ಪಯಣವನ್ನು ಮೆಲುಕು ಹಾಕಿದ ಅವರು, ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಾವೇ ಧೈರ್ಯದಿಂದ ಮೆಟ್ಟಿ ನಿಲ್ಲಬೇಕು ಎಂದರು. ವಿವಿಧ ಕ್ಷೇತ್ರಗಳಲ್ಲಿ ತಾವು ನಿರ್ವಹಿಸಿದ ವೈವಿಧ್ಯಮಯ ಜವಾಬ್ದಾರಿಗಳು ತಮ್ಮ ಸಾಧನೆಯ ಮೆಟ್ಟಿಲುಗಳಾದ ಬಗೆಯನ್ನು ಇದೇ ವೇಳೆ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹಂಚಿಕೊಂಡರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್‌. ಚನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಂಗಳೂರಿನ ಜನಪ್ರಿಯ ಮನೆಯಂಗಳದಲ್ಲಿ ಮಾತುಕತೆ ಮಾದರಿಯನ್ನು ಪ್ರತಿ ಜಿಲ್ಲೆಗೂ ವಿಸ್ತರಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ವಿಭಾಗ ಮಟ್ಟದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಾಲಿನ ಮೊದಲ ಸಾಧಕರಾಗಿ ಡಾ. ಕೃಷ್ಣ ಕೊಲ್ಲಾರ ಕುಲಕರ್ಣಿ ಆಯ್ಕೆಯಾಗಿರುವುದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.