ಸಿಡಿಲು ಬಡಿದು ಎತ್ತು ಸಾವು
ಹೂವಿನಹಡಗಲಿ 23: ತಾಲೂಕಿನಲ್ಲಿ ಶನಿವಾರ ಸಂಜೆ ನಾನಾ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದೆ.
ಭಾರಿ ಗಾಳಿ, ಸಿಡಿಲುನಿಂದ ಗ್ರಾಮದ ರೈತ ಕೆ.ಲಕ್ಷ್ಮಪ್ಪ ಎಂಬುವರಿಗೆ ಸೇರಿದ್ದು, 30ಸಾವಿರ ರೂ.ಬೆಲೆ ಬಾಳುತ್ತಿತ್ತು. ಮಳೆ ಬರುವ ವೇಳೆ ಹೊರಗಡೆ ಕಟ್ಟಿ ಹಾಕಿದ್ದ ಎತ್ತಿಗೆ ಸಿಡಿಲು ಬಡಿದಿದ್ದು ಮೃತಪಟ್ಟಿದೆ. ಹಿರೇಹಡಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.