ತಾಲೂಕು ಕೇಂದ್ರ ಘೋಷಣೆ ಮಾಡುವಂತೆ ಸಂಘಟನೆಗಳು, ಗ್ರಾಪಂಗಳ ಬೆಂಬಲ
Organizations, Gram Panchayats support announcement of Taluk Center
ಹಾರೂಗೇರಿ, 18 : ಹಾರೂಗೇರಿ ತಾಲೂಕು ಘೋಷಣೆಗೆ ಒತ್ತಾಯಿಸಿ ತಾಲೂಕು ಹೋರಾಟ ಸಮಿತಿ ಗುರುವಾರ ನೀಡಿದ್ದ ಹಾರೂಗೇರಿ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗಳು ಸಂಪೂರ್ಣ ಬಂದ್ ಮಾಡಿ, ವರ್ತಕರು, ನಾನಾ ಸಂಘಟನೆಗಳು ಹಾರೂಗೇರಿ ತಾಲೂಕು ಹೋರಾಟಕ್ಕೆ ಬೆಂಬಲ ನೀಡಿದವು.
ತಾಲೂಕು ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಂಬೇಡ್ಕರ ವೃತ್ತದವರೆಗೆ ಸಂಚರಿಸಿ, ರಾಯಬಾಗ ತಹಸೀಲ್ದಾರ ಮಹಾದೇವ ಸನ್ನಮೂರೆ ಅವರಿಗೆ ಮನವಿ ಸಲ್ಲಿಸಿದರು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಿದರೂ ಜನರ ಸಂಚಾರ ಕಡಿಮೆಯಿತ್ತು, ಬಂದ್‌ಗೆ ಅಟೋರೀಕ್ಷಾ, ಖಾಸಗೀ ವಾಹನ ಮಾಲೀಕರ ಸಂಘವೂ ಬೆಂಬಲ ವ್ಯಕ್ತ ಪಡಿಸಿದ್ದರಿಂದ ಪಟ್ಟಣದಲ್ಲಿ ಬಸ್ ಸಂಚಾರ ಹಾಗೂ ವಾಹನ ಸಂಚಾರ ವಿರಳವಾಗಿತ್ತು.
ಹಾರೂಗೇರಿ ಬಂದ್‌ಗೆ ಬೆಂಬಲ ಸೂಚಿಸಿದ ಸುತ್ತಮುತ್ತಲಿನ 27 ಗ್ರಾಮಗಳ ಮುಖಂಡರು, ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಹಾರೂಗೇರಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಠರಾವು ಮಾಡಿ, ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಾರೂಗೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಜಿನ್ನಪ್ಪ ಅಸ್ಕಿ ಹಾರೂಗೇರಿ ಬಂದ್ ಮಾಡಿ ತಾಲೂಕಾ ಹೋರಾಟಕ್ಕೆ 27 ಗ್ರಾಮಗಳು ಬೆಂಬಲ ಸೂಚಿಸಿದ್ದರ ಹಿಂದಿನ ಜನರ ಭಾವನೆಗಳನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಹಾರೂಗೇರಿ ತಾಲೂಕು ಹೋರಾಟವನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು. ಹಾರೂಗೇರಿ ತಾಲೂಕಾಗುವವರೆಗೂ ಹೋರಾಟ ನಿರಂತರವಾಗಿ ಮುಂದುವರೆಯಲಿದ್ದು, ಈ ಭಾಗದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷ್ಯಾತೀತವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.
ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡಿ ತಾಲೂಕು ಕೇಂದ್ರವಾಗಿ ರೂಪುಗೊಳ್ಳುವ ಎಲ್ಲ ಅರ್ಹತೆಗಳನ್ನು ಹಾರೂಗೇರಿ ಪಡೆದುಕೊಂಡಿದೆ. ಸರ್ಕಾರ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಜನರ ತೊಂದರೆ ತಪ್ಪಿಸಲು ಹಾರೂಗೇರಿಯನ್ನು ತಾಲೂಕು ಕೇಂದ್ರ ಮಾಡುವುದು ಅಗತ್ಯವಾಗಿದೆ. ಈ ಭಾಗದ ಲಕ್ಷ್ಯಾಂತರ ಜನರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕೆಂದು ಹೇಳಿದರು.
ರಾಮಣ್ಣ ಗಸ್ತಿ, ರಾಜಶೇಖರ ಪಾಟೀಲ, ಡಾ.ಎಲ್.ಜಂಬಗಿ, ತಾಲೂಕು ಕಸಾಪ ಅಧ್ಯಕ್ಷ ಈರಣ್ಣಗೌಡ ಪಾಟೀಲ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಬಿ.ಆರ್.ಆಜೂರೆ, ಸುರೇಶ ಐಹೊಳೆ, ಬಿ.ಬಿ.ಮುಗಳಿಹಾಳ, ಡಾ.ಸಿ.ಆರ್.ಗುಡಸಿ ಮತ್ತಿತರರು ಮಾತನಾಡಿದರು. ಎನ್.ಎಸ್.ಚೌಗಲಾ, ಎಸ್.ಎ.ದಟವಾಡ, ಧನಪಾಲ ಶಿರಹಟ್ಟಿ, ಶ್ರೀಶೈಲಗೌಡ ಉಮರಾಣಿ, ಬಾಬು ಪರಮಗೌಡರ, ಬಿ.ಬಿ.ಕರ್ಣವಾಡಿ, ಅಶೋಕ ಅರಕೇರಿ, ಬಿ.ಎಸ್.ಮೋರ್ಡಿ, ವಸಂತ ಅಲಖನೂರ, ಮಹೇಶ ಐಹೊಳೆ, ಅರ್ಷದ ಪಠಾಣ, ಅಜೀತ ಬಸ್ತವಾಡ, ಮಾಳು ಹಾಡಕಾರ, ಆನಂದ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 