ವೈಯುಕ್ತಿಕ ಕಾರಣ ಅಲ್ಲ, ಅರೋತೆ ರಾಜೀನಾಮೆಗೆ ಆಟಗಾತರ್ಿಯರ ಭಿನ್ನಾಭಿಪ್ರಾಯವೇ ಕಾರಣ?
ನವದೆಹಲಿ 11: ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಧಾನ ಕೋಚ್ ತುಷಾರ್ ಅರೋತೆ ರಾಜಿನಾಮೆ ವಿಚಾರ ವ್ಯಾಪಕ ಚಚರ್ೆಗೆ ಗ್ರಾಸವಾಗಿರುವಂತೆಯೇ, ಆರೋತೆ ರಾಜಿನಾಮೆಗೆ ಮಹಿಳಾ ಕ್ರಿಕೆಟ್ ತಂಡದ ಆಟಗಾತರ್ಿಯರ ಭಿನ್ನಾಭಿಪಾಯವೇ ಕಾರಣ ಎನ್ನಲಾಗಿದೆ.
ಇಂದು ಕೋಟ್ ತುಷಾರ್ ಅರೋತೆ ಅವರು ವೈಯುಕ್ತಿಕ ಕಾರಣ ನೀಡಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಿಸಿಸಿಐ ಕೂಡ ಅರೋತೆ ಅವರ ರಾಜಿನಾಮೆಯನ್ನು ಅಂಗೀಕರಿಸಿತ್ತು. ಇದೇ ನವೆಂಬರ್ ನಲ್ಲಿ ಗಯಾನದಲ್ಲಿ ಐಸಿಸಿ ಮಹಿಳಾ ವಿಶ್ವ ಟಿ20 ಟೂನರ್ಿ ಆರಂಭವಾಗಲಿದ್ದು, ನವೆಂಬರ್ 9ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಅರೋತೆ ಅವರ ರಾಜಿನಾಮೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಇನ್ನು ಪ್ರಧಾನ ಕೋಚ್ ತುಷಾರ್ ಅರೋತೆ ಅವರ ರಾಜಿನಾಮೆಗೆ ತಂಡದ ಆಟಗಾತರ್ಿಯರೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಸ್ವತಃ ಅರೋತೆ ಅವರು ಆಟಗಾತರ್ಿಯರು ನನ್ನ ವಿರುದ್ಧವಾಗಿದ್ದಾರೆ ಎಂದು ಹೇಳುವ ಮೂಲಕ ತಂಡದಲ್ಲಿನ ಆಂತರಿಕ ಸಂಘರ್ಷವನ್ನು ಬಹಿರಂಗಗೊಳಿಸಿದ್ದಾರೆ.
ಬಿಸಿಸಿಐನ ಮತ್ತೊಂದು ಮೂಲಗಳ ಪ್ರಕಾರ ಮಹಿಳಾ ಕ್ರಿಕೆಟ್ ತಂಡದ ಕೋಚ್ ತುಷಾರ್ ಅರೋತೆ ಅವರು ರಾಜಿನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ತಂಡದಲ್ಲಿನ ಕೆಲ ಹಿರಿಯ ಆಟಗಾತರ್ಿಯರು ಅರೋತೆ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.
ಅಲ್ಲದೆ ತಂಡದ ಅಧಿಕಾರಿಗಳ ಮೇಲೆ ಅರೋತೆ ರಾಜಿನಾಮೆಗೆ ಒತ್ತಾಯಿಸಿದ್ದರು ಎನ್ನಲಾಗಿದೆ. ಅರೋತೆ ಅವರನ್ನು ಕೋಚ್ ಸ್ಥಾನದಿಂದ ಕಿತ್ತೊಗೆಯುವ ಬದಲು ಅವರಿಂದಲೇ ರಾಜಿನಾಮೆ ಪಡೆಯಬೇಕು ಎಂದು ನಿರ್ಧರಿಸಲಾಗಿತ್ತಂತೆ ಎಂದು ಹೇಳಲಾಗುತ್ತಿದೆ.
ಇನ್ನು ರಾಜಿನಾಮೆ ಅಂಗೀಕಾರಕ್ಕೂ ಮುನ್ನ ತುಷಾರ್ ಅರೋತೆ ಅವರು ಬಿಸಿಸಿಐನ ಆಡಳಿತಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಟಗಾತರ್ಿಯರ ಕೆಲ ಸಂದೇಶಗಳನ್ನು ಕೂಡ ಇಲ್ಲಿ ತಿಳಿಸಲಾಗಿತ್ತಂತೆ. ಪ್ರಮುಖವಾಗಿ ತುಷಾರ್ ಅರೋತೆ ಅವರ ಕೋಚಿಂಗ್ ಮಾದರಿ ಆಟಗಾತರ್ಿಯರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಆಟಗಾತರ್ಿಯರು ಮಾತ್ರವಲ್ಲ ತಂಡದ ಮ್ಯಾನೇಜರ್, ಆಯ್ಕೆ ಸಮಿತಿ ಕೂಡ ಅರೋತೆ ಕುರಿತಂತೆ ಅಸಮಾಧಾನ ಹೊಂದಿತ್ತು ಎನ್ನಲಾಗಿದೆ.
ಒಟ್ಟಾರೆ ಬರೋಡಾದ ಮಾಜಿ ಕ್ರಿಕೆಟಿಗ ತುಷಾರ್ ಅರೋತೆ ತಮ್ಮ ಪ್ರಧಾನ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 