ನೂತನ ಬಸ್ ಸಂಚಾರ ಆರಂಭ; ಗ್ರಾಮಸ್ಥರಿಂದ ಪೂಜೆ
New bus traffic started; Worship by villagers
ಲೋಕದರ್ಶನ ವರದಿ
ಯರಗಟ್ಟಿ 11 : ಸಮೀಪದ ನುಗ್ಗಾನಟ್ಟಿ ಗ್ರಾಮಕ್ಕೆ ಈಚಗೆ ನೂತನ ಬಸ್ ಸಂಚಾರ ಆರಂಭವಾಗಿದ್ದು ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ ಮಾತನಾಡಿ, ಗ್ರಾಮಕ್ಕೆ ಮುಖ್ಯ ಹೆದ್ದಾರಿಯಿಂದ 1 ಕಿ.ಮೀ ದೂರ ಇದ್ದು ಬಹುದಿನಗಳಿಂದ ಶಾಲಾ ಕಾಲೇಜು ಮಕ್ಕಕಳು, ವೃದ್ಧರಿಗೆ ತುಂಬ ತೊಂದರೆ ಆಗುತ್ತಿತ್ತು. ಹಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಶಾಸಕ ವಿಶ್ವಾಸ ವೈದ್ಯ ಸಮಸ್ಯಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಸಿದ್ದರೆಎಂದು ಹೇಳಿದ್ದಾರೆ. ಚಾಲಕ್ ಹಾಗೂ ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡ ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ, ಬಸಲಿಂಗಯ್ಯ ಹಿರೇಮಠ, ಅದೃಶ ಶೀಲವಂತರ, ರಾಮನಗೌಡ ಪಾಟಿಲ. ಮುದಕಪ್ಪ ಅರಸಿಗುಡಿ, ಮಾರುತಿ ಕೊದನ್ನವರ, ಗಂಗಪ್ಪ ಶೀಲವಂತರ, ಮಹಂತೇಶ ಹಡಪದ, ದೆವಪ್ಪ ಸನ್ನಮ್ಮನವರ, ಶಿವಾನಂದ ಮುರಗೋಡ, ಮಹಾಂತೇಶ ನೇಸರಗಿ, ಶೇಖರ ಶೀಲವಂತರ ಮತ್ತಿತರಿದ್ದರು.
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ 