ನರೇಗಾ ಕಾಮಗಾರಿ ಪರೀಶೀಲನೆ ಮಾಡಿದ: ಪೃಥ್ವಿರಾಜ್ ಪಾಟೀಲ
Narega work inspected by: Prithviraj Patil
ಇಂಡಿ 04: ತಾಲ್ಲೂಕಿನ ಕೊಳುರಗಿ ಗ್ರಾಮ ಪಂಚಾಯಿತಿಯ ಸಾವಳಸಂಗ ಗ್ರಾಮದಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ಸಾವಳಸಂಗ ಗ್ರಾಮದ ಕೆರೆ ಹೂಳು ತೆಗೆಯುವ ಕಾಮಗಾರಿಗೆ ಜಿಲ್ಲಾ ಪಂಚಾಯತ್ ಂಆಕಅ ಪೃಥ್ವಿರಾಜ್ ಪಾಟೀಲ್ ಅವರು ಭೇಟಿ ನೀಡಿ ಕಾಮಗಾರಿ ಪರೀಶೀಲನೆ ನಡೆಸಿದರು.
ಕೆರೆ ಹೂಳು ತೆಗೆಯುವ” ಕಾಮಗಾರಿ ಸ್ಥಳದಲ್ಲಿ ಹೆಣ್ಣು 10 ಗಂಡು 04 ಒಟ್ಟು 14 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಂಆಕಅ ಪೃಥ್ವಿರಾಜ್ ಪಾಟೀಲ ಅವರು ಕೂಲಿಕಾರರೊಂದಿಗೆ ಸಂವಾದ ನಡೆಸಿ ಮನರೇಗಾ ಯೋಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಆಗಮಿಸುವಂತೆ ಪ್ರೇರೇಪಿಸಿ, ಕೆಲಸದ ಬೇಡಿಕೆ ಪಡೆದು ಉದ್ಯೋಗ ಒದಗಿಸುವ ಕಾರ್ಯವನ್ನು ಸಮರ್ಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಓಒಒಖ ಫೇಸ್ ಅಥೆಂಟಿಕೇಶನ್ ಪರೀಶೀಲನೆ ನಡೆಸಿ, ಕೂಲಿಕಾರರ ಹಾಜರಾತಿ ದಾಖಲಾತಿಯನ್ನು ಸಮರ್ಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ದುರ್ಗಾ ದೇವಿ ಗುಡಿಯ ಹತ್ತಿರ ಸಿ ಸಿ ರಸ್ತೆ ಹಾಗೂ ಆರ್ ಸಿ ಸಿ ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಕಡತಗಳನ್ನು ಪರೀಶೀಲನೆ ಮಾಡಿದರು. ನಂತರ ಕೊಳುರಗಿ ಗ್ರಾಮ ಪಂಚಾಯತಿಯ ಮಾನವ ದಿನಗಳ ಸೃಜನೆ, ಜ-ಏಙಅ ಪ್ರಗತಿ ಹಾಗೂ ಕೂಲಿಕಾರರಿಂದ ನಮೂನೆ-6 ರಲ್ಲಿ ಕೆಲಸದ ಬೇಡಿಕೆ ಪಡೆದು ತಕ್ಷಣ ಕೆಲಸ ನೀಡುವ ಕುರಿತು ಪರೀಶೀಲನೆ ನಡೆಸಿದರು.
ಮನರೇಗಾ ಯೋಜನೆ ಕುರಿತು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಅರ್ಹ ಕುಟುಂಬಗಳು ಯೋಜನೆಯ ಸದುಪಯೋಗ ಪಡೆಯುವಂತೆ ಕಾರ್ಯನಿರ್ವಹಿಸಬೇಕು ಎಂದು ಪಿಡಿಓ ಶಿವು ಪೂಜಾರಿ ರವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊಳುರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಿವು ಪೂಜಾರಿ, ಎಸ್ ಡಿ ಎ ವಿ ಬಿ ಅಂಕಲಗಿ, ತಾಲೂಕು ಐಇಸಿ ಸಂಯೋಜಕ ರಾಮಗೌಡ ಸರಬಡಗಿ , ತಾಂತ್ರಿಕ ಸಹಾಯಕರು ಬಾಬು ನಾಯಕ ,ಹಾಗೂ ಬಿ ಎಪ್ ಟಿ ಕಾಲೇಸಾಬ್ ಸೈಯದ್, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ನರೇಗಾ ಕೂಲಿಕಾರರು, ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 