ನರೇಗಾ ಯೋಜನೆ: ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ
ಹೂವಿನಹಡಗಲಿ 04: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಮೈಲಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡೋಂಬರಹಳ್ಳಿ ಗ್ರಾಮದ ನಾನಾ ಕಡೆಗಳಲ್ಲಿ ಕಾಮಗಾರಿಯನ್ನು ವೀಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ ಕೆರೆ ಹೂಳೆತ್ತುವ ಕಾಮಗಾರಿ ಪರೀಶೀಲನೆಯನ್ನು ಮಾಡಿದರು.ನರೇಗಾ ಮೂಲಕ ಕೆರೆ ಕುಂಟೆಗಳ ಅಭಿವೃದ್ದಿ,ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದ ಅವರು ಎನ್.ಎಂ.ಎಂ.ಎಸ್. ಚಕ್ ಮಾಡಲಾಯಿತು ಹಾಗೂ ಕೂಲಿಕಾರರಿಗೆ ವೈಯಕ್ತಿಕ ಕಾಮಗಾರಿಗಳ ಮಾಡಿಕೊಳ್ಳಲು ಮತ್ತು ನಿರಂತರವಾಗಿ ಮೂರು ದಿನಗಳ ಕಾಲ ಕೆಲಸ ಮಾಡಲು ಮಾಹಿತಿಯನ್ನು ನೀಡಲಾಯಿತು. ಈ ವೇಳೆ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಡಾಟಾಎಂಟ್ರಿ ಆಪರೇಟರ್ ಮತ್ತು ದುಡಿಯೋಣ ಬಾ ರಾಯಭಾರಿ, ಗ್ರಾಮ ಕಾಯಕ ಮಿತ್ರ ಹಾಜರಿದ್ದರು.