ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸಲು ಮುಸ್ಲಿಮರ ಮೌನ ಪ್ರತಿಭಟನೆ
Muslims hold silent protest to repeal Waqf Amendment Act
ಕೊಪ್ಪಳ 04: ಮುಸ್ಲಿಂ ಸಮುದಾಯ ವನ್ನು ಹತ್ತಿಕ್ಕಲು ಹುನ್ನಾರ ನಡೆಸಿದ ಕೇಂದ್ರ ಸರ್ಕಾರ ಇತ್ತೀಚಿಗೆ ತಂದಿರುವ ವಕ್ಫ್ ತಿದ್ದುಪಡೆ ಕಾಯ್ದೆ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಬೋರ್ಡ್ ಮತ್ತು ಮುಸ್ಲಿಂ ಸಂಘಟನೆ ಯ ನಿರ್ದೇಶನದಲ್ಲಿ ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕ ಕೇಂದ್ರ ಗಳಲ್ಲಿರುವ ಮಸೀದಿಗಳ ಮುಂದೆ ಶುಕ್ರವಾರದ ವಿಶೇಷ ಪ್ರಾರ್ಥನೆಯ ಬಳಿಕ ಮಸೀದಿ ಎದುರುಗಡೆ ಮಾನವ ಸರಿ್ಳ ಮಾಡಿ ಎಲ್ಲರೂ ಒಕ್ಕೂರಿನಿಂದ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಗರದ ಅಮೀನ್ ಪೂರ್ ಬಡಾವಣೆಯ ರೈಲ್ವೆ ಸ್ಟೇಷನ್ ದಾರಿಯಲ್ಲಿರುವ ಮಸ್ಜಿದೆ ಆಲಾ ದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಬಳಿಕ ಮಸೀದಿ ಎದುರುಗಡೆ ಇರುವ ರಸ್ತೆಯಲ್ಲಿ ಸಾಮೂಹಿಕವಾಗಿ ಮಾನವ ಸರಿ್ಳ ನಿರ್ಮಿಸಿ ಮೌನ ಪ್ರತಿಭಟನೆಯನ್ನು ಮಾಡಿದರು, ಇಲ್ಲಿನ ಮೌನ ಪ್ರತಿಭಟನೆಯ ನೇತೃತ್ವವನ್ನು ಮೌಲಾನ ಮೊಹಮ್ಮದ್ ಫಜೀಲ್ ಅಹಮದ್ ರವರು ವಹಿಸಿಕೊಂಡಿದ್ದರು ಅಧಿಕ ಸಂಖ್ಯೆಯಲ್ಲಿ ಮುಸ್ಲಿಮರು ಇದರಲ್ಲಿ ಪಾಲ್ಗೊಂಡಿದ್ದರು.
ಅದರಂತೆ ನಗರದ ವಿವಿಧ ಮಸೀದಿ ಗಳ ಎದುರುಗಡೆ ಎಲ್ಲಾ ಮುಸ್ಲಿಂ ಸಮುದಾಯದವರು ಸೇರಿಕೊಂಡು ಮಾನವ ಸರಿ್ಳ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಲಾಯಿತು ಹಾಗೂ ಕೂಡಲೇ ವಕ್ಫ್ ತಿದ್ದುಪಡಿ ಕಾಯ್ದೆ ರದ್ದು ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 