ಸಮಾಜಕ್ಕೆ ಮುರುಘಾ ಮಠದ ಕೊಡುಗೆ ಅಪಾರ: ಡಾ. ಯಾಕೊಳ್ಳಿ
Murugan Mutt's contribution to society is immense: Dr. Yakolli
ಲೋಕದರ್ಶನ ವರದಿ
ಧಾರವಾಡ 15 : ಧಾರವಾಡ ಮುರುಘಾ ಮಠ ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಸಾಹಿತ್ಯ, ಸಂಗೀತ, ಉಚಿತ ಪ್ರಸಾದ, ಜ್ಞಾನ ದಾಸೋಹ, ಅನ್ನ ದಾಸೋಹದ ಕ್ಷೇತ್ರ ಅಪಾರ ಕೊಡುಗೆಯನ್ನು ನೀಡಿದೆ. ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಮತ್ತು ಧಾರವಾಡದ ಉಳಿದ ಶಾಲೆಯಲ್ಲಿ ಕಲಿಯಲು ಬರುವ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಮಾಡಿದ ಸಹಾಯದಿಂದ ಇಂದು ಮುರುಘಾ ಮಠದ ಉಚಿತ ಪ್ರಸಾದ ನಿಲಯದಲ್ಲಿದ್ದು ಓದಿದವರು ದೇಶ ವಿದೇಶಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾರೆ ಉದಾಹರಣೆಗೆ ಹಳ್ಳಿಕೇರಿ ಗುದ್ಲೆಪ್ಪ, ಡಾ. ಚೆನ್ನವೀರ ಕಣವಿ, ಪಾಟೀಲ್ ಪುಟ್ಟಪ್ಪ ಇತ್ಯಾದಿ.
ವಚನ ಸಾಹಿತ್ಯ ಪ್ರಕಟಣೆ ಉಪನ್ಯಾಸ, ಚಿಂತನ ಮಂಥನ, ಶಿವಿನುಭವ ತರಗತಿಗಳು, ಸಾವಧಾನ ಆಧ್ಯಾತ್ಮಿಕ ಪತ್ರಿಕೆಯ ಮೂಲಕ ಜನರನ್ನು ಆಕರ್ಷಿಸಿತು. ಪ್ರೊ. ಸಂ ಶಿ ಭೂಸನೂರಮಠ, ಡಾ. ಆರ್. ಸಿ. ಹಿರೇಮಠ, ಡಾ. ಎಮ್ ಎಸ್ ಸುಂಕಾಪೂರ, ಅವರು ಈ ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಿದರು. ಡಾ. ಮಲ್ಲಿಕಾರ್ಜುನ ಮನ್ಸೂರ್ ಸಂಗೀತ ಕ್ಷೇತ್ರಕ್ಕೆ ದೊಡ್ಡ ಕಾಣಿಕೆ ನೀಡಿದರು. ಮೃತ್ಯುಂಜಯ ಅಪ್ಪಗಳು, ಮಹಾಂತ ಅಪ್ಪಗಳು, ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಠದ ಘನತೆಯನ್ನು ಹೆಚ್ಚಿಸಿದ್ದಾರೆಂದು ಡಾ. ವಾಯ್ ಎಮ್ ಯಾಕೊಳ್ಳಿ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ದತ್ತಿ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಾ ತಿಳಿಸಿದರು.
ದತ್ತಿ ಉದ್ಘಾಟಿಸಿದ ಮಾಜಿ ಮಹಾ ಪೌರರಾದ ಶಿವು ಹಿರೇಮಠ ಅವರು ಕಲ್ಯಾಣ ನಗರದಲ್ಲಿ ಇರುವ ಹಿರಿಯರೆಲ್ಲರು ಮುರುಘಾ ಮಠದಲ್ಲಿದ್ದು ಕಲಿತವರೇ ಹೆಚ್ಚಾಗಿದ್ದಾರೆ. ಮಠದ ಕಾರ್ಯಕ್ರಮಗಳಿಗೆ, ಯೋಜನೆಗಳಿಗೆ ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು. ಸುಜಾತಾ ಗುರವ ಅವರು ವಚನ ಸಂಗೀತ ಪ್ರಸ್ತುತ ಪಡಿಸಿದರು. ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ ಹಡಗಲಿ ನಿರೂಪಿಸಿದರು. ಮಹಾಂತೇಶ ನರೇಗಲ್ ವಂದಿಸಿದರು. ವೇದಿಕೆ ಮೇಲೆ ಡಾ. ಹೇಮಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ಎನ್ ಆರ್ ಬಾಳಿಕಾಯಿ, ಎಚ್ ಎಸ್ ಪ್ರತಾಪ್, ಗಂಗಾಧರ ಗಾಡದ, ಬಿ ಜಿ ಬಾರ್ಕಿ, ಎಮ್.ಸಿ ಯಲಿಗಾರ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿವು ಹಿರೇಮಠ, ಡಾ. ವಾಯ್ ಎಮ್ ಯಾಕೊಳ್ಳಿ ಹಾಗೂ ಸುಜಾತಾ ಗುರವ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 