ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲು ಡಿಸಿಗೆ ಮುಳಜಿ ಮನವಿ
Mulaji appeals to DC to provide more bus services
ಇಂಡಿ 06: ದೇವರಹಿಪ್ಪರಗಿ ಮಾರ್ಗವಾಗಿ ಹೆಚ್ಚುವರಿ ಮತ್ತು ಸರಿಯಾದ ಸಮಯಕ್ಕೆ ಬಸ್ ಓಡಿಸಲು ವಿಜಯಪುರ ಸಾರಿಗೆ ಇಲಾಖೆ ಡಿಸಿ ಅವರಾದ ಡಿ.ಎ.ಬಿರಾದಾರ ಅವರಿಗೆ ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾಧ್ಯಕ್ಷರಾದ ಶ್ರೀಶೈಲ ಮುಳಜಿ ಅವರಿಂದ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. ನಂತರ ಮಾತನಾಡಿ, ಇಂಡಿ - ದೇವರ ಹಿಪ್ಪರಗಿ ಎರಡು ತಾಲೂಕ ಕೇಂದ್ರಗಳಾಗಿದ್ದು ಈ ರಸ್ತೆಯು ರಾಜ್ಯ ಹೆದ್ದಾರಿ ವಾಗಿದ್ದು, ಈ ಮಾರ್ಗದಲ್ಲಿ ದಿನ ನಿತ್ಯ ಸುಮಾರು ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ, ಸಾರ್ವಜನಿಕರು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ ಹಿಗಾಗಿ ಈ ಮಾರ್ಗದಲ್ಲಿ ಬಸ್ಸಿನ ಸಂಖ್ಯೆ ಕಡಿಮೆ ಆಗಿದ್ದು ಮತ್ತು ಸರಿಯಾದ ಸಮಯಕ್ಕೆ ಓಡುವುದಿಲ್ಲ ಹಿಗಾಗಿ ಇಲ್ಲಿನ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಕೂಡಲೇ ಹೆಚ್ಚಿನ ಬಸ್ಸಿನ ವ್ಯವಸ್ಥೆ ಮಾಡಬೇಕು ಮತ್ತು ಸರಿಯಾದ ಸಮಯಕ್ಕೆ ಓಡಿಸಬೇಕು ಎಂದು ಮನವಿ ಮಾಡಲಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲಕಾಜಪ್ಪಸಾಹುಕಾರ ಚಂಡಕಿ, ದೇವರ ಹಿಪ್ಪರಗಿ ಕರವೇ ತಾಲೂಕು ಅಧ್ಯಕ್ಷರಾದ ರಹಿಮಾನ್ ಕನಕಲ್, ಜಾವೀದ್ ಕೊಲ್ಹಾರ ಸೇರಿದಂತೆ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 