ತಾಯಂದಿರ ದಿನ: ಸಚಿವ ಸೋಮಶೇಖರ್ ಶುಭಾಶಯ
ಬೆಂಗಳೂರು, ಮೇ 10,ವಿಶ್ವ ತಾಯಂದಿರ ದಿನಾಚರಣೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶುಭಾಶಯ ಕೋರಿದ್ದಾರೆ.ಬಸಿರಿನಲ್ಲಿ ನವ ಮಾಸಗಳು ಹೊತ್ತು, ಉಸಿರಿತ್ತು ಜನ್ಮ ನೀಡಿ, ತುತ್ತಿಟ್ಟು ಮುತ್ತಿಟ್ಟು, ಹೆಸರಿಟ್ಟು ಜಗಕೆ ತೋರಿಸಿ, ಗರಿಗೆದರುವ ಮುನ್ನ ಜನ್ಮದಾತನು ಮರೆಯಾದರೂ, ಮಕ್ಕಳಿಗಾಗಿ ನೋವ ನುಂಗಿ, ನಮ್ಮ ಓರೆ, ಕೋರೆಗಳ ದೂರಮಾಡಿ, ಬಾಳಿನ ನಾಳೆಯ ಕನಸುಗಳ ಗರಿ ಮೂಡಿಸಿ ತಿದ್ದಿ ತೀಡಿ ಸವಿ ಸಂಗೋಪನೆಯಲಿ ಸಲಹಿ, ನಾವು ಬದುಕಿನ ಏಳಿಗೆಯ ಬೆಟ್ಟ ಹತ್ತಲು ಬೆನ್ನಿಗೆ ನಿಂತು, ಶಿಖರವೇರಿದ ಕರುಳ
ಕುಡಿಯ ಕಂಡು ಹಿರಿ ಹಿರಿ ಹಿಗ್ಗಿ ಸಗ್ಗದ ಸುಖವ ಕಂಡ ಜನ್ಮದಾತೆ, ಪ್ರೀತಿಯಿಂದ ಪೊರೆದಾತೆ ನೀನು. ನನಗೆ ಇಂದಿಗೂ ಆಶ್ಚರ್ಯವಾಗುವ ಸಂಗತಿಯೆಂದರೆ ನಿನ್ನಲ್ಲಿರುವ ಮಾಸದ ಚೈತನ್ಯ, ಚುರುಕುತನ. ಇದೇ ನನಗೆ ಈ ಸಂದರ್ಭದಲ್ಲಿ ಸ್ಫೂರ್ತಿಯಾಗಿದೆ. ನಿನ್ನ ಮಾದರಿಯಲ್ಲೇ ನಾನಿಂದು ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ಸರ್ವಸ್ವವೂ ನೀನಾಗಿರುವ ಪ್ರೀತಿಯ ಅಮ್ಮನಿಗೆ ಜಾಗತಿಕ ಜನ್ಮದಾತೆಯರ ದಿನದ ಪ್ರೀತಿಯ ಹೃದಯಂಗಮ ಪ್ರಣಾಮಗಳು.ಇಂದಿನ ಯುವ ಪೀಳಿಗೆಗೆ ನನ್ನ ಮನವಿ ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಹೆತ್ತವರನ್ನು ಮರೆಯದೇ ಪೊರೆಯುವುದು ಪರಮಧರ್ಮವಲ್ಲವೇ. ತಂದೆ -ತಾಯಿಗಳಿಗಿಂತ ಬಂಧುಗಳಿಲ್ಲ. ಉಪ್ಪಿಗಿಂತ ರುಚಿ ಬೇರಿಲ್ಲ. ಈ ನಿಟ್ಟಿನಲ್ಲಿ ಹೆತ್ತವರನ್ನು ಗೌರವಿಸಿ, ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 