ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ

ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ Monthly meeting of the Government Retired Employees Association

ತಾಳಿಕೋಟಿ 08: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ತಾಲೂಕ ಘಟಕ ತಾಳಿಕೋಟಿ ಇದರ ಪದಾಧಿಕಾರಿಗಳ ಮಾಸಿಕ ಸಭೆ ಸ್ಥಳೀಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಜರುಗಿತು. ಸಂಘದ ಅಧ್ಯಕ್ಷರಾದ ಸಿ.ಎಂ. ಹಿರೇಮಠ ಇವರ ಘನ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭಗೊಂಡಿತು. ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಜಿ ಎಸ್ ದೇಸಾಯಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಸಂಘದ ಅಧ್ಯಕ್ಷರಾದ ಸಿ.ಎಂ. ಹಿರೇಮಠರವರು ಸಂಘಕ್ಕೆ ಅಗತ್ಯವಾದ ಕೆಲವೊಂದು ಬೇಡಿಕೆಗಳನ್ನು ಸರಕಾರದ ಮುಂದೀಡಬೇಕೆಂದು ಈ ಕೆಳಗಿನ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿದರು.

ಸಂಘದ ದಾಖಲೆಗಳನ್ನು ಇತರೆ ಕಾಗದಪತ್ರಗಳನ್ನು ಸುರಕ್ಷಿತವಾಗಿಡಲು ಹಾಗೂ ಮಾಸಿಕ ಸಭೆ ನಡೆಸಲು ಸ್ವಂತ ಕಟ್ಟಡ ನಿವೇಶನಕ್ಕಾಗಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಕುರಿತು ಚರ್ಚಿಸಿದರು ೨).೬೦ ರಿಂದ ೭೦ ವಯೋಮಾನದ ನಿವೃತ್ತ ನೌಕರರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಂಧ್ಯಾಕಿರಣ, ಆರೋಗ್ಯ ಸಂಜೀವಿನಿ ಪ್ರಮಾಣ ಪತ್ರವನ್ನು ಸರಕಾರದಿಂದ ಪಡೆದುಕೊಳ್ಳುವುದು ೩).೭೦ ರಿಂದ ೮೦ ವಯಸ್ಸಿನ ನಿವೃತ್ತ ನೌಕರನಿಗೆ ಆರೋಗ್ಯ ಭಾಗ್ಯ (ಆಯುಷ್ಮಾನ್ ಭಾರತ) ಇದನ್ನು ನಿವೃತ್ತ ನೌಕರರಿಗೂ ಅವಕಾಶ ಕಲ್ಪಿಸಿ ಕೊಡಬೇಕು ೪). ಶವ ಸಂಸ್ಕಾರಕ್ಕಾಗಿ ಸರಕಾರ ಅನುದಾನ ನೀಡಬೇಕು ೫). ಸಂಘದ ಬಲವರ್ಧನೆಗಾಗಿ ಸದಸ್ಯರನ್ನು ದಾಖಲೆ ಮಾಡಿಕೊಳ್ಳಲು ಎಲ್ಲರೂ ಕೈಜೋಡಿಸಬೇಕೆಂದು ಸಂಘದ ಸದಸ್ಯರಲ್ಲಿ ಮತ್ತು ಆಡಳಿತ ಮಂಡಳಿಯವರಲ್ಲಿ ಕೋರಿದರು. 

ಎಂ.ಎಸ್ .ಹುಲ್ಲೂರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷರಾದ ಬಿಜಿ ಚಿತ್ತಾಪುರ ವಂದನಾರ್ಪಣೆ ಮಾಡಿದರು  ಅಶೋಕ ಕುಲಕರಣಿ ಶ್ರೀಧರ್ ಐತಾಳ್ ಎಂ.ಬಿ .ಮುರಾಳಎಲ್.ಆರ್ ಸಮಾಜಕಟ್ಟಿ ಹುಲುಗಪ್ಪ ಕಟ್ಟಿಮನಿ ಸಿ ಎಸ್ ಗೋಗಿ ಐ ಆರ್ ಕಲಬುರ್ಗಿ ಜಿ.ಎಸ್. ಜಂಬಲದಿನ್ನಿ, ಬಾಲಕೃಷ್ಣ ಜಿಂಗಾಡಿ ಇನ್ನಿತರ ಸಂಘದ ಸದಸ್ಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಂಘ ,ಚಿ- ರಾಯುವಾಗಲೆಂದು ಜಗನ್ಮಾತೆ ಕಾಳಿಕಾ ದೇವಿ ಯಲ್ಲಿ ಎಲ್ಲರೂ ಪ್ರಾರ್ಥಿಸಿದರು. ಸಭೆಯು ಮುಕ್ತಾಯಗೊಂಡಿತು.