ಹೂವಿನ ಹಡಗಲಿ

ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ

ಹೂವಿನ ಹಡಗಲಿ  09- ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಸತತ ಅಧ್ಯಯನ ಅವಶ್ಯ ಎಂದು ತಹಶೀಲ್ದಾರ್ ಕೆ ಎಂ ಗುರುಬಸವರಾಜ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಶ್ರೀಮತಿ ರುದ್ರಾಂಬ ಎಂ ಪಿ ಪ್ರಕಾಶ್ ಸರ್ಕಾರಿ ಪದವಿ ಕಾಲೇಜಿನಸಭಾಂಗಣದಲ್ಲಿ  ತರುಣ ಸಂಘದ ವತಿಯಿಂದ ಆಯೋಜಿಸಿದ್ದ 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾ ಮನೋಭಾವನೆ ಇದೆ.

ಉದ್ಯೋಗ ಪಡೆಯುವಲ್ಲಿ ಸಹ ಹೆಚ್ಚಿನ ಸಂಖ್ಯೆಯ ಪೈಪೋಟಿ ಉಂಟಾಗುತ್ತಿದೆ.ವಿದ್ಯಾರ್ಥಿಗಳು ಅಂಕಗಳನ್ನು ಮಾತ್ರ ಬೆನ್ನು ಹತ್ತದೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜ ಸೇವೆಗೆ ಮುಂದಾಗಿರಿ ಎಂದು ಕಿವಿಮಾತು ಹೇಳಿದರು.ಪ್ರತಿ ವರ್ಷ ತರುಣ ಸಂಘದವರು ಶೈಕ್ಷಣಿಕ ಸಾಧಕರಿಗೆ ಹಣದ ರೂಪದಲ್ಲಿ ಸಹಾಯದ ಜೊತೆಗೆ ಗೌರವಿಸುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ ಮಾತನಾಡಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆಯ ಕನಸು ಕಾಡಬೇಕು.ಐಎಎಸ್ ಐಪಿಎಸ್ ಕೆ ಎ ಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಮೂಲಕ ಉನ್ನತ ಸಾಧನೆ ಮಾಡಿರಿ ಎಂದು ಹೇಳಿದರು. 


ಸುದ್ದಿ ಓದಿ