ಗ್ರಾಮ ಸ್ವರಾಜ್ಯ ಕರ್ನಾಟಕ ವತಿಯಿಂದ ಜಿಪಂ ಉಪಕಾರ್ಯದರ್ಶಿ ಡಾ.ಪುನೀತ್ ಅವರಿಗೆ ಮನವಿ

ಗ್ರಾಮ ಸ್ವರಾಜ್ಯ ಕರ್ನಾಟಕ ವತಿಯಿಂದ ಜಿಪಂ ಉಪಕಾರ್ಯದರ್ಶಿ ಡಾ.ಪುನೀತ್  ಅವರಿಗೆ ಮನವಿ Memorandum submitted to Zilla Panchayat Deputy Secretary Dr. Puneeth by Grama Swarajya Karnataka

ಲೋಕದರ್ಶನ ವರದಿ 

ಹಾವೇರಿ 25 : ಕಂದಾಯ ಇಲಾಖೆಯ ಹಾಗೂ ಅಧೀನದಲ್ಲಿ ಇರುವ ಭೂಮಾಪನ ಇಲಾಖೆಗಳ ಜಂಟಿಯಾಗಿ ಜಿಲ್ಲೆಯ ಎಲ್ಲ ಕೆರೆಗಳ ಹದ್ದು ಬಸ್ತು ಹಾಗೂ ಅತಿಕ್ರಮಣ ತೆರವುಗೊಳಿಸಿ,ಕೆರೆಗಳ ವಸ್ತು ಸ್ಥಿತಿ ಪರೀಶೀಲಿಸಿ ಕೆರೆಗಳ ಕಬ್ಜಾ ಪಾವತಿ ಹಸ್ತಾಂತರವನ್ನು ಗ್ರಾಮ ಪಂಚಾಯತಿಗಳಿಗೆ ನೀಡುವಂತಾಗಬೇಕು ಎಂದು ಗ್ರಾಮ ಸ್ವರಾಜ್ಯ ಕರ್ನಾಟಕ ವತಿಯಿಂದ ಜಿಪಂ ಉಪಕಾರ್ಯದರ್ಶಿ ಡಾ.ಪುನೀತ್  ಅವರಿಗೆ ಮನವಿ ಸಲ್ಲಿಸಲಾಯಿತು.  

ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಕೆರೆಗಳ ಕಬ್ಬಾ ಪಾವತಿ ಹಸ್ತಾಂತರ ಮಾಡುತ್ತಿರುವುದು ಅಸಮರ​‍್ಕ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಹಸ್ತಾಂತರ ಮಾಡುತ್ತಿರುವುದು ಕಂಡು ಬಂದಿರುತ್ತದೆ.ಸದರಿ ಕೆರೆಗಳು ಸಾಕಷ್ಟು ಒತ್ತುವರಿ ಆಗಿದ್ದು,ಈ ಕುರಿತು ಕೆರೆಗಳ ಒತ್ತುವರಿ ಹದ್ದು ಬಸ್ತ್‌ ಮಾಡಿಸಿ ಒತ್ತುವರಿ ತೆರವುಗೊಳಿಸುವಂತೆ ಈಗಾಗಲೇ ಆದೇಶ ಮಾಡಿದ್ದರು. ಸಂಬಂಧಿಸಿದ ಕಂದಾಯ ಇಲಾಖೆ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳು ಸಾಕಷ್ಟು ಕೆರೆಗಳ ಹದ್ದು ಬಸ್ತ ಹಾಗೂ ಒತ್ತುವರಿ ತೆರವುಗೊಳಿಸದೇ ಕಬ್ಬಾ ಪಾವತಿ ಮಾಡುತ್ತಿರುವುದು ಕಂಡು ಬರುತ್ತಿದೆ.

ಸದರಿ ಕೆರೆಗಳ ಸರ್ವೆ ಕಾರ್ಯಕ್ಕೆ ನೇಮಿಸಿದ ಅಧಿಕಾರಿಗಳಿಗೆ ಸದರಿ ಕೆರೆಗಳ ಅಳತೆಗೆ ಸಂಬಂಧಿಸಿದಂತೆ ಹಣ ಪಾವತಿ ಮಾಡಿದ್ದು,ಆದರೆ ಸದರಿ ಸರ್ವೆ ಕಾರ್ಯ ಪೂರ್ಣವಾಗದಿದ್ದರೂ ಹಣ ಪಾವತಿಸಿ ಹಣ ದುರಪಯೋಗ ವಡಿಸಿಕೊಂಡಿರುವುದು ಹಾಗೂ ಸಾಕಷ್ಟು ಕೆರೆಗಳಲ್ಲಿ ಅಕ್ರಮವಾಗಿ ಮಣ್ಣನ್ನು ಅಗೆದು ತೆಗೆದು ಕೆಳಗಿನ ಮೇಲ್ಮಟ್ಟದಿಂದ 10 ರಿಂದ 15 ಪೂಟ್ ಆಳವಾಗಿ ಅಗೆದು ತೆಗೆದಿರುವುದು ಕಂಡು ಬಂದಿದೆ.

ಈ ಎಲ್ಲ ಅಂಶಗಳ ನ್ಯೂನತೆಗಳ ಇದ್ದಾಗಲು ಗ್ರಾಮ ಪಂಚಾಯತಿಗಳಿಗೆ ಕೆರೆಗಳ ಕಬ್ಬಾ ಪಾವತಿ ಮಾಡುತ್ತಿರುವದು ಕಾನೂನು ಬಾಹಿರವಾಗಿರುತ್ತದೆ.ಕೆರೆಗಳ ಹದ್ದು ಬಸ್ತ ಮತ್ತು ಒತ್ತುವರಿ ತೆರವುಗೊಳಿಸಿ ಜಂಟಿ ಸಮೀಕ್ಷೆಯಲ್ಲಿ ಕರೆಗಳ ಕಬ್ಜಾ ಪಾವತಿ ಹಸ್ತಾಂತರ ಮಾಡಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯ ಕರ್ನಾಟಕದ ಮುಖಂಡರಾದ ಶಿವಲಿಂಗಪ್ಪ ತಲ್ಲೂರ,ನಿಂಗಪ್ಪ ಆರೇರ,ಅನಂತರಾಜ ಎಮ್‌.ಹೆಚ್,ಮಲ್ಲಿಕಾರ್ಜುನ ಬಾಳೂರು,ಕರಬಸಪ್ಪ ಹೆಬ್ಬಳಿ,ರವಿ ಹರಕೋಣಿ ಇನ್ನಿತರರಿದ್ದರು.