ಗುರು ಪೌರ್ಣಿಮೆಯಲ್ಲಿ ರೈತ ನಾಯಕರಿಗೆ ವಿಶೇಷ ಪ್ರಶಸ್ತಿ

ಗುರು ಪೌರ್ಣಿಮೆಯಲ್ಲಿ ರೈತ ನಾಯಕರಿಗೆ ವಿಶೇಷ ಪ್ರಶಸ್ತಿ  Special award for farmer leaders on Guru Purnima

ರಾಯಬಾಗ 25 : ಹುಕ್ಕೇರಿ   ಗುರುಶಾಂತೇಶ್ವರ ಸಂಸ್ಥಾನ ಹೀರೆಮಠ ರಾಯಬಾಗ ಶಾಖಾ ಮಠದ ವತಿಯಿಂದ ಜು.27 ರಂದು ಆಯೋಜಿಸಿರುವ ಗುರು ಪೌರ್ಣಿಮೆ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಅವರಿಗೆ ’ರೈತ ನಾಯಕ ’ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿಯವರಿಗೆ ’ರೈತ ನೇತಾರ’ ಪ್ರಶಸ್ತಿ ನೀಡಲಾಗುವುದು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀಯವರು ಸಾನಿಧ್ಯ ವಹಿಸಲಿದ್ದು, ಶಾಸಕ ಡಿ.ಎಮ್‌.ಐಹೊಳೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಯುವ ಧುರೀಣ ಅರುಣ ಐಹೊಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.