ಮಾಗಳ-ವಿಠಲಾಪುರ ಯಾಂತ್ರೀಕೃತ ದೋಣಿ ಪ್ರಯಾಣಿಕರಿಗೆ ಅರೆ್ಣ
ಲೋಕದರ್ಶನ ವರದಿ
ಹೂವಿನಹಡಗಲಿ ಆ.17- ತಾಲೂಕಿನ ಮಾಗಳ- ಬಿದರೆಹಳ್ಳಿ , ವಿಠಲಾಪುರ ಮಧ್ಯೆ ಸಂಚರಿಸುತ್ತಿದ್ದ ಯಾಂತ್ರೀಕೃತ ದೋಣಿ ಪಂಚಮಿ ಹಬ್ಬದ ದಿನ ಸೋಮವಾರ ಚಾಲನೆ ನೀಡಲಾಯಿತು.ಮಾಗಳ ಬಿದರಹಳ್ಳಿ ಮಧ್ಯೆ ಯಾಂತ್ರೀಕೃತ ದೋಣಿ ದುರಸ್ತಿ ಯಿಂದ ಮಾಗಳ -ಬಿದರಹಳ್ಳಿ, ವಿಠಲಾಪುರ ಸಂಚಾರ ಇರಲಿಲ್ಲ.ಒಳನಾಡು ಮತ್ತು ಬಂದರು ಜಲಸಾರಿಗೆ ಇಲಾಖೆ ಅಧಿಕಾರಿಗಳು ಜನರಿಗೆ ಆಗುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತೆ ಸಂಚಾರಕ್ಕೆ ಅರೆ್ಣ ಯಾಗಿದೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ದೋಣೆಯಿಂದ ವಿಜಯನಗರ, ಗದಗ, ಹಾವೇರಿ ಮೂರು ಜಿಲ್ಲೆಗಳ ಗ್ರಾಮಗಳಿಗೆ ಸಂಪರ್ಕ ಪಡೆದು ಕೊಂಡಿದೆ.ಇದೇ ವೇಳೆ ಮಾಗಳದ ಮುಖಂಡರಾದ ಬಿ.ಎಲ್.ಶ್ರೀಧರ, ಸತ್ಯನಾರಾಯಣ ರೆಡ್ಡಿ, ಹೆಚ್.ಕೋಟೆಪ್ಪ, ಲಕ್ಕಣ್ಣನವರ ಮಂಜುನಾಥ, ಬಸಪ್ಪ, ಆರ್.ಮಂಜಪ್ಪ, ಅಲ್ಲಳ್ಳಿ ಮಂಜುನಾಥ ಇದ್ದರು.