ಹೂವಿನ ಹಡಗಲಿ

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮಾಸ್ಕ್‌ ವಿತರಣೆ: ಜಾಗೃತಿ

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮಾಸ್ಕ್‌ ವಿತರಣೆ: ಜಾಗೃತಿ

ಹೂವಿನಹಡಗಲಿ 16: ಕೋವಿಡ್‌-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ತಾಲೂಕಿನ ಹೊಳಗುಂದಿ ಗ್ರಾಮ ಪಂಚಾಯ್ತಿವತಿಯಿಂದ ಇಲ್ಲಿನ ಎಎಂಪಿಎಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮಾಸ್ಕ್‌ ವಿತರಿಸಿ ಜಾಗೃತಿ ಮೂಡಿಸಲಾಯಿತು. 

ಗ್ರಾಮ ಪಂಚಾಯ್ತಿ ಪಿಡಿಒ ಪರಮೇಶ್ವರ​‍್ಪ ಮಾತನಾಡಿ ಈಚೆಗೆ ಕೋವಿಡ್ ವ್ಯಾಪಾಕವಾಗಿ ಹರಡುತ್ತಿದ್ದರೂ ಅನೇಕ ಜನ ಮಾಸ್ಕ್‌ ಧರಿಸುತ್ತಿಲ್ಲ ಅರಿವು ಮೂಡಿಸುವುದರ ಜತೆಗೆ ನಿಯಮ ಮೀರುವವರ ಮೇಲೆ ದಂಡ ಹಾಕಲಾಗುತ್ತಿದೆ ಎಂದ ಅವರು ವ್ಯಾಪಾರಿಗಳು ಅಂತರ ಕಾಯ್ದು ಕೊಂಡು ತರಕಾರಿ, ಹಣ್ಣು ಮಾರಾಟ ಮಾಡಬೇಕು. ಒಂದೆಡೆ ಗುಂಪು ಗುಂಪಾಗಿ ಸೇರಿದಂತೆ ನೋಡಿಕೊಳ್ಳಬೇಕು. ಸ್ವಚ್ಚತೆ ಕಾಯ್ದುಕೊಂಡು ವ್ಯಾಪಾರಿಗಳು, ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದರು. ಗ್ರಾ.ಪಂ.ಸದಸ್ಯ ರುದ್ರಗೌಡ ಮಾತನಾಡಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಉತ್ತಮ ಅಂಕಗಳನ್ನು ಪಡೆಯರಿ ಎಂದರು. 

ಗ್ರಾ.ಪಂ.ಸದಸ್ಯೆ ಹೆಚ್‌.ವೀರಮ್ಮ ಮಾತನಾಡಿ ಸ್ವರ್ಧಾತ್ಮಕ ಯುಗದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳದೇ ಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತನ್ನಿ ಎಂದ ಅವರು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ 1001 ರೂ. ಕೊಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯಿಂದ ಮಕ್ಕಳಿಗೆ, ಪಾಲಕರಿಗೆ ಉಚಿತ ಮಾಸ್ಕ್‌ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಸಣ್ಣದ ಸಿದ್ದಪ್ಪ, ಉಪಾಧ್ಯಕ್ಷ ಎ.ರಮೇಶ, ಸದಸ್ಯರಾದ ಸ್ವರೂಪಾನಂದ, ದಡರ​‍್ಪ, ಪರಸಪ್ಪ, ಅಮೃತ, ಅನುಮಕ್ಕ, ಶಾಲೆಯ ಮುಖ್ಯ ಗುರುಗಳಾದ ವೆಂಕಟೇಶ, ಶಿಕ್ಷಕ ಭೀಮಾನಾಯ್ಕ ಇದ್ದರು, 


ಸುದ್ದಿ ಓದಿ