ನಗರ ಸಂಚಾರಿ ಸಾರಿಗೆ ವಾಹನದ ಸದುಪಯೋಗ ಪಡೆದುಕೊಳ್ಳಿ : ಉಪ ಮೇಯರ್ ಸುಮಿತ್ರಾ ರಾಜು ಜಾಧವ
Make good use of urban public transport: Deputy Mayor Sumitra Raju Jadhav
ಲೋಕದರ್ಶನ ವರದಿ
ವಿಜಯಪುರ 03 : ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದೆ, ಪ್ರಯಾಣಿಕರ ದಿನನಿತ್ಯದ ಸಂಚಾರದ ಅನುಕೂಲಕ್ಕಾಗಿ ನಗರದಲ್ಲಿ ನಗರ ರಸ್ತೆ ಸಾರಿಗೆ ನಿಗಮದಿಂದ ನೂತನ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಜಯಪುರ ಮಹಾನಗರ ಪಾಲಿಕೆಯ ಉಪಮೇಯರ್ ಸುಮಿತ್ರಾ ರಾಜು ಜಾಧವ ಕರೆ ನೀಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ಘಟಕ 03, ಸೇಟಲೈಟ್ ಬಸ್ ನಿಲ್ದಾಣದಿಂದ ಮನಗೂಳಿ ಅಗಸಿ, ಪುಲಕೇಶಿ ನಗರ, ಜಗಜ್ಯೋತಿ ಬಸವೇಶ್ವರ ಕಾಲೇಜ್, ಗಣೇಶ ನಗರವರೆಗೆ ನೂತನ ಎರಡು ನಗರ ಸಂಚಾರ ಬಸ್‌ಗಳ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು ನೂತನ ಸುಸಜ್ಜಿತ ಬಸ್ಸುಗಳು ಸಾರ್ವಜನಿಕರಿಗೆ ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹೆಚ್ಚು ಅನುಕೂಲವಾಗಿವೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರು ಮಾತನಾಡಿ, ಸಾರಿಗೆ ಇಲಾಖೆ ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಬಸ್‌ಗಳಿಗೆ ಕೊರತೆಯಿಲ್ಲ. ಪ್ರತಿಯೊಂದು ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಲಾಗಿದೆ. ಮೊದಲಿಗಿಂತ ಈಗ ಹೆಚ್ಚು ಹೊಸ ವಿಶೇಷ ಸುಸಜ್ಜಿತ ಬಸ್ಸುಗಳು ಸಂಚರಿಸುತ್ತಿದ್ದು. ಸಾರ್ವಜನಿಕರ ಬೇಡಿಕೆಗಳನ್ನು ಆಧರಿಸಿ ಅವಶ್ಯವಿದ್ದಲ್ಲಿ ಹೆಚ್ಚಿನ ಬಸ್ಸುಗಳನ್ನು ಕಲ್ಪಿಸಲಾಗುವುದು. ಸಾರ್ವಜನಿಕರು ಬಸ್ಸುಗಳನ್ನು ತಮ್ಮದೇ ಸ್ವಂತ ವಾಹನವೆಂದು ಭಾವಿಸಿ ಬಸ್ಸುಗಳಲ್ಲಿ ಹಾಗೂ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಸ್‌ನಲ್ಲಿ ಜನದಟ್ಟಣೆ ಇದ್ದಾಗ ವಾಹನ ಚಾಲಕರೊಂದಿಗೆ ನಿರ್ವಾಹಕರೊಂದಿಗೆ ಸಹಕರಿಸಿ ಸೇವೆಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಕರೆ ನೀಡಿದರು.
ವಿಭಾಗೀಯ ರಸ್ತೆ ಸಾರಿಗೆ ಅಧಿಕಾರಿ ಎಂ ಎಸ್, ಹಿರೇಮಠ, ಜಿಲ್ಲಾ ರಸ್ತೆ ಸಾರಿಗೆ ಮೂರನೇ ಘಟಕದ ವ್ಯವಸ್ಥಾಪಕ ರವಿ ಹಳ್ಳಿ ಸಂಧರ್ಭಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಉದ್ದಿಮೆದಾರ ಕುಶರಾಜ್ ಪರಣ್ಣವರ, ಪುಲಕೇಶಿ ನಗರ ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಲ್ ಬಿ. ಪಾಟೀಲ ಅವರು ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ನಗರ ಸಂಚಾರಿ ಸಾರಿಗೆ ವಾಹನ ಕಲ್ಪಿಸಿದ ಅಧಿಕಾರಿಗಳಾದ ದೇವಾನಂದ ಬಿರಾದಾರ ಹಾಗೂ ಎಂ ಎಸ್ ಹಿರೇಮಠ ಅವರನ್ನು ಹರ್ಷ ವ್ಯಕ್ತಪಡಿಸಿ ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಗಣ್ಯರಾದ ಸುರೇಶ ಕ.ಪಾಟೀಲ, ಪಾರಿಸ ಶಿರಹಟ್ಟಿ, ನ್ಯಾಯವಾದಿ ದಾನೇಶ ಅವಟಿ, ರಾಜು ಜಾಧವ, ನಿಂಗನಗೌಡ ಬಿರಾದಾರ, ಸುರೇಶ ದೇಸಾಯಿ, ಅಶೋಕ ಬಸರಗಿ, ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜೆನ ಪ್ರಾಚಾರ್ಯ ಲಕ್ಷ್ಮೀಶ ದೇಸಾಯಿ, ಸಾರಿಗೆ ಇಲಾಖೆ ಚಾಲಕರು, ನಿರ್ವಾಹಕರು, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ತಿತರಿದ್ದರು. ನೂತನ ವಾಹನಗಳಿಗೆ ಶೃಂಗರಿಸಿ, ತಳಿರು ತೋರಣ ಹಾಕಿ ಪೂಜೆ ಪುನಸ್ಕಾರ ಸಲ್ಲಿಸಿ ಸಿಹಿ ವಿತರಿಸಲಾಯಿತು.
.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 