ಸತ್ಯ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಮಹರ್ಷಿ ವಾಲ್ಮೀಕಿ: ಪ್ರೊ. ಕೌಜಗೇರಿ
Maharishi Valmiki is the pioneer of truth and social justice: Prof. Kaujageri
ಲೋಕದರ್ಶನ ವರದಿ
ಸತ್ಯ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಮಹರ್ಷಿ ವಾಲ್ಮೀಕಿ: ಪ್ರೊ. ಕೌಜಗೇರಿ
ಗದಗ 08: ಭಾರತೀಯ ಸಂಸ್ಕೃತಿ, ಧರ್ಮ, ಸಮಾಜ, ಜೀವನ ಮೌಲ್ಯಗಳ ಹಿರಿಮೆಯನ್ನು ‘ರಾಮಾಯಣ’ ಕಾವ್ಯದ ಮೂಲಕ ಜಗತ್ತಿಗೆ ಪರಿಚಯಿಸಿರುವ ಮಹರ್ಷಿ ವಾಲ್ಮೀಕಿ ಸಾರ್ವಕಾಲಿಕ ಸಂತರಾಗಿದ್ದು, ಮಾನವರು ಸತ್ಯ, ಧರ್ಮ, ತ್ಯಾಗ, ಕರುಣೆ, ಸಹಾನುಭೂತಿ ಇತ್ಯಾದಿ ಆದರ್ಶಗಳು ಮತ್ತು ಕ್ರೋಧ, ಮಾನ, ಮಾಯಾ, ಲೋಭ ಇತ್ಯಾದಿ ಕಷಾಯಗಳಿಂದ ಹೊಂದುವ ಸ್ಥಾನಮಾನಗಳನ್ನು ಕಾವ್ಯದಲ್ಲಿ ವಿವಿಧ ಪಾತ್ರಗಳ ಮೂಲಕ ಚಿತ್ರಿಸಿರುವ ಅವರ ಬರವಣಿಗೆ ಕಲೆ ಇಂದಿಗೂ ಆದರ್ಶವಾಗಿದೆ ಎಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಹರ್ಷಿ ವಾಲ್ಮೀಕಿ ಜಯಂತಿ’ಯ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಸತ್ಯ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು, ವಿಚಾರಗಳು, ಸಂದೇಶಗಳು ಇಂದು ತುಂಬಾ ಪ್ರಸ್ತುತವಾಗಿವೆಯೆಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್. ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ರಾಮಾಯಣ ಮಹಾಕಾವ್ಯದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನು ಪರಿಚಯಿಸುತ್ತ ಪಾಶ್ಚಾತ್ಯ ಸಂಸ್ಕೃತಿ, ವಿಚಾರ, ಸಿದ್ಧಾಂತ, ವಾದಗಳ ಪ್ರಭಾವದಿಂದ ಕುಲುಷಿತವಾಗುತ್ತಿರುವ ಮನಸ್ಸುಗಳಿಗೆ ಈ ಮಹಾಕಾವ್ಯದ ಓದು ಅಗತ್ಯವಾಗಿದೆ ಎಂದು ಹೇಳಿದರು. ಕನ್ನಡ ಪ್ರಾಧ್ಯಾಪಕ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ರಾಮಾಯಣ ಮಹಾಕಾವ್ಯದ ಭಾಷೆ, ಸಾಹಿತ್ಯದ ಕುರಿತು ಮಾತನಾಡಿದರು. ಉಮೇಶ ಹುಯಿಲಗೋಳ ಪೂಜೆ ನೆರವೇರಿಸಿದರು.
ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ಆಂತರಿಕ ಪರೀಕ್ಷಾ ಸಂಚಾಲಕ ಪ್ರೊ. ಲಕ್ಷ್ಮಣ ಮುಳಗುಂದ ನಿರೂಪಣೆ, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ಕ್ರೀಡಾ ಸಂಚಾಲಕ ಮಹಾಂತೇಶ ವಂದನಾರೆ್ಣಗೈದರು. ಬೋಧಕರು, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 