ರೈತರ ಸತ್ಯಾಗ್ರಹ ಸ್ಥಳಕ್ಕೆ ಮಹಾಲಿಂಗಪುರ ಭಾಜಪ ಪಕ್ಷದಿಂದ ಆಹಾರ ವಸ್ತುಗಳ ಪೂರೈಕೆ
Mahalingapur BJP party supplies food items to farmers' satyagraha site
ಮಹಾಲಿಂಗಪುರ 05: ರೈತರ ಬೇಡಿಕೆ ಈಡೇರಿಕೆಗೆ ನಡೆದಿರುವ ಅನ್ನದಾತರ ಸತ್ಯಾಗ್ರಹಕ್ಕೆ ಮಹಾಲಿಂಗಪುರ ಪಟ್ಟಣದ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಆಹಾರದ ವಸ್ತುಗಳನ್ನು ಪೂರೈಕೆ ಮಾಡಿ ನಾವೆಲ್ಲ ಸತ್ಯಾಗ್ರಹ ನಿರತರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಮುಖಂಡ ಶಂಕರಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಕಬ್ಬಿನ ಬೆಲೆ ಹೆಚ್ಚಳವಾಗದೆ ತುಟ್ಟಿ ಜಮಾನಾದ ಪ್ರಸ್ತುತ ದಿನಗಳಲ್ಲಿ ಬೆಲೆ ಏರಿಕೆ ಬೇರೆ ರೈತನ ತಲೆ ಸುಡುತ್ತಿದೆ. ರೈತ ಬಾಂಧವರ ಹೊರತು ಪಡಿಸಿ ಸರ್ಕಾರ, ಕಾರ್ಖಾನೆ ಮಾಲಿಕರು ಮತ್ತು ಬಿಡಿ ವ್ಯಾಪಾರಸ್ಥರು ಸೇರಿದಂತೆ ಎಲ್ಲ ವರ್ಗದವರೂ ಲಾಭದಲ್ಲಿ ಇದ್ದಾರೆ.ಈಗ ರೈತರಿಗೆ ವೈಜ್ಞಾನಿಕ ಅರಿವು ಉಂಟಾಗಿ ನಾವು ಬೆಳೆದ ಬೆಳೆಗೆ ಕನಿಷ್ಠ ರೂಪದಲ್ಲಿ 3.5 ಸಾವಿರ ಟನ್ ಕಬ್ಬಿಗೆ ಬೆಲೆ ನಿಗದಿ ಮಾಡಬೇಕೆಂದು ಕಾರ್ಖಾನೆಗಳಿಗೆ ಕೇಳುತ್ತಿದ್ದು, ಇದರಲ್ಲಿ ಯಾವುದೇ ತರಹದ ತಾರತಮ್ಯವಿಲ್ಲ. ಈಗಾಗಲೆ ಸತ್ಯಾಗ್ರಹ 8 ದಿವಸಗಳನ್ನು ಕಳೆಯುತ್ತಿದೆ, ಇನ್ನು ಹೆಚ್ಚು ದಿನ ರೈತರ ತಾಳ್ಮೆ ಪರಿಕ್ಷಿಸದೆ ರೈತರ ನ್ಯಾಯಯುತ ದರ ಘೋಷಣೆ ಮಾಡಿ ಕಾರ್ಖಾನೆಗಳನ್ನು ಆರಂಭಿಸಿ ಬರುವ ದಿನಗಳು ದುರ್ಗಮವಾಗಲು ಅವಕಾಶ ನೀಡಬಾರದು ಎಂದರು.
ಸ್ಥಳೀಯ ಭಾಜಪದ ಮುಖಂಡರು, 3 ಸಾವಿರ ರೊಟ್ಟಿ, 10 ಕಟ್ಟಾ ಅಕ್ಕಿ, ಎಣ್ಣೆ ಡಬ್ಬಿಗಳು ಮತ್ತು ಇನ್ನಿತರ ಆಹಾರ ವಸ್ತುಗಳನ್ನು ಎಪಿಎಂಸಿ ಗಣೇಶ ಪ್ರಾಂಗಣದಿಂದ ಟ್ರ್ಯಾಕ್ಟರ್ ಮೂಲಕ ಗುರ್ಲಾಪೂರ ಕ್ರಾಸ್ ನಲ್ಲಿ ಸತ್ಯಾಗ್ರಹ ನಿರತ ಸ್ಥಳಕ್ಕೆ ರವಾನಿಸಿ ತಮ್ಮ ಅಳಿಲು ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾಜಪ ಪಕ್ಷದ ಮುಖಂಡರಾದ ಬಸನಗೌಡ ಪಾಟೀಲ್, ಮಹಾಲಿಂಗಪ್ಪ ಕೋಳಿಗುಡ್ಡ, ಶಂಕರಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಯಲ್ಲಪ್ಪ ಹಟ್ಟಿ, ಸದಾಶಿವ ಗೊಬ್ಬರದ, ಮಹೇಶ್ ಹುಬ್ಬಳ್ಳಿ, ರಾಜು ಕೋಳಿಗುಡ್ಡ, ದೀಲೀಪ್ ಸುಣದೋಳಿ, ಶಿವಾನಂದ ತಾಳಿಕೋಟಿ, ಮಹೇಶ್ ಸುಣದೋಳಿ, ಬನ್ನೂರ ಸರ್ ಇನ್ನಿತರರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 